ಸಾಂದರ್ಭಿಕ ಚಿತ್ರ 
ದೇಶ

ಮಣಿಪುರ ಮಾಜಿ ಸಚಿವ ಗಂಗುಮೇಯಿ ಕಬುಯಿ ನಿಧನ

ಮಣಿಪುರದ ಮಾಜಿ ಸಚಿವ ಗಂಗುಮೇಯಿ ಕಬುಯಿ ಅವರು ನಿಧನರಾಗಿದ್ದು ಅವರಿಗೆ 77 ವರ್ಷ ವಯಸ್ಸಾಗಿತ್ತು.

ಇಂಫಾಲ: ಮಣಿಪುರದ ಮಾಜಿ ಸಚಿವ ಗಂಗುಮೇಯಿ ಕಬುಯಿ ಅವರು ನಿಧನರಾಗಿದ್ದು ಅವರಿಗೆ 77 ವರ್ಷ ವಯಸ್ಸಾಗಿತ್ತು.

ರಾಜಧಾನಿ ಇಂಫಾಲದಲ್ಲಿರುವ ಅವರ ನಿವಾಸದಲ್ಲೇ ಗಂಗುಮೇಯಿ ಕಬುಯಿ ಅವರು ಇಂದು ಬೆಳಗ್ಗೆ ಸುಮಾರು 8.15ರ ಸುಮಾರಿನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ  ತುತ್ತಾಗಿದ್ದ ಗಂಗುಮೇಯಿ ಕಬುಯಿ ಅವರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ರಾಜಕೀಯ ಮಾತ್ರವಲ್ಲದೇ ಸಾಹಿತ್ಯ ಕ್ಷೇತ್ರದಲ್ಲೂ ಜನಪ್ರಿಯರಾಗಿದ್ದ ಗಂಗುಮೇಯಿ ಕಬುಯಿ ಅವರು ಸುಮಾರು 15ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಪ್ರಖ್ಯಾತ ಇತಿಹಾಸಕಾರರಾಗಿದ್ದ ಗಂಗುಮೇಯಿ ಕಬುಯಿ ಅವರು  ಮಣಿಪುರದ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ನುಂಗ್ಬಾ ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗಂಗುಮೇಯಿ ಕಬುಯಿ ಅವರು 90ರ ದಶಕದಲ್ಲಿ 2 ಬಾರಿ ಸಚಿವರಾಗಿದ್ದರು. 2013ರಲ್ಲಿ  ಅವರು ಬಿಜೆಪಿ ಸೇರ್ಪಡೆಯಾಗಿದ್ದರು.

ಖ್ಯಾತ ಇತಿಹಾಸ ತಜ್ಞರಾಗಿದ್ದ ಗಂಗುಮೇಯಿ ಕಬುಯಿ ಅವರು ಸಾಕಷ್ಟು ಇತಿಹಾಸಕ್ಕೆ ಸಂಬಂಧಿಸಿದ ಸಾಮಾಜಿಕ ಸಂಸ್ಥೆಗಳನ್ನು ಹುಟ್ಟುಹಾಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ