ದೇಶ

ಅನಾರೋಗ್ಯ ಪೀಡಿತ ಮಗನ ದಯಾಮರಣಕ್ಕೆ ಅವಕಾಶ ನೀಡಿ: ಪ್ರಧಾನಿ ಮೋದಿಗೆ ತಂದೆ ಪತ್ರ

Vishwanath S
ಆಗ್ರ: ಅನಾರೋಗ್ಯದಿಂದ ಬಳಲುತ್ತಿರುವ ಮಗನಿಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ತಂದೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 
ಉತ್ತರಪ್ರದೇಶದ ಕಾರ್ಮಿಕನಾಗಿರುವ ರಾಜು ಎಂಬುವರು ತಮ್ಮ ಮಗ ವಿಪಿನ್ ಅಂಗವೈಕಲ್ಯ ರಕ್ತಹೀನತೆ, ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದು ಈ ನರಕದಿಂದ ಮುಕ್ತಿ ನೀಡುವ ಸಲುವಾಗಿ ದಯಾಮರಣಕ್ಕೆ ಅವಕಾಶ ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ಜತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಪ್ರತ್ಯೇಕ ಪತ್ರವನ್ನು ಬರೆದಿದ್ದಾರೆ. 
ಹಲವು ವರ್ಷಗಳಿಂದ ತನ್ನ ಮಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗನ ಚಿಕಿತ್ಸೆಗಾಗಿ ಸಾಕಷ್ಟು ದುಡ್ಡು ಮಾಡಿದ್ದೇನೆ. ಆದರೆ ಆತನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ. ಹೀಗಾಗಿ ಆತನಿಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಪತ್ರ ಬರೆದಿದ್ದಾರೆ. 
ಮಗ ವಿಪಿನ್ ಗೆ ಮೂಳೆ ಮಜ್ಜೆಯ ಕಸಿ ಮಾಡಬೇಕಿದೆ. ವಿಪಿನ್ ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆ ಎಂದು ಈಗಾಗಲೇ ಹಲವು ಆಸ್ಪತ್ರೆಗಳಿಗೆ ತಿರುಗಿದ್ದೇವೆ ಆದರೆ ಸುಧಾರಣೆ ಕಾಣಿಸುತ್ತಿಲ್ಲ. ಮೂಳೆ ಮಜ್ಜೆಯ ಕಸಿಗಾಗಿ ಲಕ್ಷಾಂತರ ರುಪಾಯಿ ವೆಚ್ಚವಾಗುವುದರಿಂದ ನಮ್ಮಿಂದ ಅಷ್ಟು ಹಣ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ತಂದೆ ತಮ್ಮ ಅಳಲನ್ನು ಪತ್ರದಲ್ಲಿ ತೊಡಿಕೊಂಡಿದ್ದಾರೆ. 
SCROLL FOR NEXT