ಮೇಘಾಲಯದ ಪಕ್ಷೇತರ ಶಾಸಕ ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್ 
ದೇಶ

ಅಪ್ರಾಪ್ತೆ ಮೇಲೆ ಅತ್ಯಾಚಾರ: ಮೇಘಾಲಯ ಶಾಸಕ ಜೂಲಿಯಸ್ ಬಂಧನ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಮೇಘಾಲಯದ ಪಕ್ಷೇತರ ಶಾಸಕ ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್ ಅವರನ್ನು ಗುವಾಹಟಿಯ ಗೊರ್'ಚುಕ್ ಪ್ರದೇಶದಲ್ಲಿ ಶನಿವಾರ ಬಂಧನಕ್ಕೊಳಪಡಿಸಲಾಗಿದೆ...

ಗುವಾಹಟಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಮೇಘಾಲಯದ ಪಕ್ಷೇತರ ಶಾಸಕ ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್ ಅವರನ್ನು ಗುವಾಹಟಿಯ ಗೊರ್'ಚುಕ್ ಪ್ರದೇಶದಲ್ಲಿ ಶನಿವಾರ ಬಂಧನಕ್ಕೊಳಪಡಿಸಲಾಗಿದೆ.

14 ವರ್ಷದ ಬಾಲಕಿಯೊಬ್ಬಳ ಮೇಲೆ ಶಾಸಕ ಜೂಲಿಯಸ್ ಅವರು ಅತ್ಯಾಚಾರ ಮಾಡಿದ್ದಾರೆಂದು ಬಾಲಕಿಯ ಕುಟುಂದವರು ಡಿ.16 ರಂದು ದೂರು ನೀಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜೂಲಿಯಸ್ ಕಿತ್'ಬಾಕ್ ದೋರ್ಫಾಂಗ್ ಅವರು ನಾಪತ್ತೆಯಾಗಿದ್ದರು.

ನಂತರ ದೋರ್ಫಾಂಗ್ ಅವರ ಬಂಧನಕ್ಕೆ ಮೇಘಾಲಯ ಪೊಲೀಸರು ಲುಕ್'ಔಟ್ ನೊಟೀಸ್ ಜಾರಿ ಮಾಡಿತ್ತು. ತದನಂತರ ಶಾಸಕ ಗುವಾಹಟಿಯಲ್ಲಿ ತಲೆಮರೆಸಿಕೊಂಡಿರುವುದಾಗಿ ಮಾಹಿತಿ ತಿಳಿಯುತ್ತಿದ್ದಂತೆ ಮೇಘಾಲಯ ಪೊಲೀಸರು ಅಸ್ಸಾಂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಅಸ್ಸಾಂ ಹಾಗೂ ಮೇಘಾಲಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಶಾಸಕ ದೋರ್ಫಾಂಗ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೋರ್ಫಾಂಗ್ ಅವರು ಪಕ್ಷೇತರ ಶಾಸಕರಾಗಿದ್ದು, ಮೇಘಾಲಯದಲ್ಲಿನ ಆಳುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದರು. ಕಳೆದ ತಿಂಗಳು ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸುತ್ತಿದ್ದ ವೇಳೆ ಗೆಸ್ಟ್ ಹೌಸ್ ನ ನೌಕರನನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಸೆಕ್ಸ್ ಜಾಲ ಬೆಳಕಿಗೆ ಬಂದಿತ್ತು. ಸೆಕ್ಸ್ ಜಾಲದಿಂದ ಪಾರಾದ ಬಳಿಕ ವಿಚಾರಣೆ ವೇಳೆ ಬಾಲಕಿ ಕೆಲವರ ಹೆಸರನ್ನು ಹೇಳಿಕೊಂಡಿದ್ದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್