ದೇಶ

ವಿಶ್ವದ ಅತೀ ದೊಡ್ಡ ವೈಫೈ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಮುಂಬೈ

Manjula VN

ಮುಂಬೈ: ವಾಣಿಜ್ಯ ನಗರಿ ಎಂಬ ಪಟ್ಟ ಪಡೆದುಕೊಂಡಿದ್ದ ಮುಂಬೈಗೆ ಶೀಘ್ರದಲ್ಲಿಯೇ ವಿಶ್ವದ ಅತೀ ದೊಡ್ಡ ವೈಫೈ ನಗರ ಎಂಬ ಪಟ್ಟ ಕೂಡ ಬರಲಿದೆ.

ಮುಂಬೈನ ಹಲವು ಪ್ರದೇಶಗಳಲ್ಲಿ 500 ವೈ-ಫೈ ಹಾಟ್ ಸ್ಪಾಟ್ ಗಳನ್ನು ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸೋಮವಾರ ಘೋಷಣೆ ಮಾಡಿದ್ದಾರೆ.

ಪ್ರಾಥಮಿಕ ಹಂತದಲ್ಲಿ 500 ವೈಫೈ ಹಾಟ್ ಸ್ಪಾಟ್ ಗಳನ್ನು ಪ್ರಾರಂಭಿಸಲಾಗುತ್ತಿದ್ದು, 2017ರ ಮೇ.1 ರೊಳಗಾಗಿ ಈ ಸಂಖ್ಯೆ 1,200ಕ್ಕೆ ಏರಿಕೆಯಾಗಲಿದೆ ಎಂದು ಫಡ್ನವೀಸ್ ಅವರು ಹೇಳಿದ್ದಾರೆ.

ನಾಗರೀಕರಿಗೆ ಉತ್ತಮ ಸೌಲಭ್ಯ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದ್ದು. ಜನರಿಗೆ ತಮ್ಮ ಹತ್ತಿರದ ಹಾಟ್'ಸ್ಪಾಟ್ ಗಳ ಬಗ್ಗೆ ತಿಳಿಯಲು ಲಿಂಕ್ ವೊಂದನ್ನು ನೀಡಲಾಗಿದೆ. ಮುಂಬೈ ನಗರ ಭಾರತದ ಅತೀ ದೊಡ್ಡ ಸಾರ್ವಜನಿಕ ವೈಫೈ ಸೇವೆ ಮತ್ತು ವಿಶ್ವದ ದೊಡ್ಡ ವೈಫೈ ಹೊಂದಿರುವ ನಗರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT