ದೇಶ

ನೋಟು ನಿಷೇಧ ಆದರೂ, ಏಪ್ರಿಲ್-ನವೆಂಬರ್ 2016 ಅವಧಿಯಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ: ಜೇಟ್ಲಿ

Vishwanath S

ನವದೆಹಲಿ: ಏಪ್ರಿಲ್-ನವೆಂಬರ್ 2016 ಅವಧಿಯಲ್ಲಿ ನೇರ ತೆರಿಗೆ ಮತ್ತು ಪರೋಕ್ಷವಾಗಿ ಅತೀ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜ್ಲೇಟಿ ಹೇಳಿದ್ದಾರೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರೂ, ಆ ಅವಧಿಯಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದರು.

ಅಂಕಿ ಅಂಶಗಳ ಪ್ರಕಾರ ಕಳೆದ ಏಪ್ರಿಲ್-ನವೆಂಬರ್ 2015ಕ್ಕೆ ಹೋಲಿಸಿಕೊಂಡರೆ 2016ರಲ್ಲಿ ಒಟ್ಟಾರೆ ನೇರ ತೆರಿಗೆ ಶೇಕಡ 12.1ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಪರೋಕ್ಷ ತೆರಿಗೆ ಕಳೆದ ವರ್ಷಕ್ಕೆ ಹೊಲಿಸಿಕೊಂಡರೇ ಶೇಕಡ 25ರಷ್ಟು ಹೆಚ್ಚಳವಾಗಿದೆ ಎಂದರು.

2016ರ ಏಪ್ರಿಲ್-ನವೆಂಬರ್ ತಿಂಗಳ ಒಟ್ಟಾರೆ ತೆರಿಗೆ ಸಂಗ್ರಹ ಕೇಂದ್ರ ಅಬಕಾರಿ ತೆರಿಗೆ ಶೇಕಡ 43ರಷ್ಟು ಹೆಚ್ಚಳ, ಸೇವಾ ತೆರಿಗೆ 23.9ರಷ್ಟು ಹೆಚ್ಚಳ, ಕಸ್ಟಮ್ ಸುಂಕ ತೆರಿಗೆ ಶೇಕಡ 4.1ರಷ್ಟು ಹೆಚ್ಚಳವಾಗಿದೆ ಎಂದರು.

ನೋಟು ನಿಷೇಧಗೊಂಡ ನವೆಂಬರ್ ತಿಂಗಳಲ್ಲಿ ಕಳೆದ 2015ರ ನವೆಂಬರ್ ತಿಂಗಳಿಗೆ ಹೋಲಿಸಿಕೊಂಡರೆ ಶೇಕಡ 14.2ರಷ್ಟು ತೆರಿಗೆ ಸಂಗ್ರಹವಾಗಿದೆ. ಡಿಸೆಂಬರ್ 2016ರಲ್ಲಿ ಕೇಂದ್ರ ಅಬಕಾರಿ ತೆರಿಗೆ 31.6ರಷ್ಟು ಸಂಗ್ರಹವಾಗಿದೆ. ಇನ್ನು ಸೇವಾ ತೆರಿಗೆ 12.4ರಷ್ಟು ಸಂಗ್ರವಾಗಿದೆ. ಅದೇ ರೀತಿ ಪರೋಕ್ಷ ತೆರಿಗೆ 12.8 ರಷ್ಟು ಸಂಗ್ರವಾಗಿದೆ ಎಂದರು.

SCROLL FOR NEXT