ಜಮ್ಮು: ಜಮ್ಮುವಿನಲ್ಲಿ ಜ.9 ರಂದು ಉಗ್ರರು ಜನರಲ್ ರಿಸರ್ವ್ ಎಂಜಿನಿಯರಿಂಗ್ ಪೋರ್ಸ್ (ಜಿಆರ್ ಇಎಫ್ ) ನ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದು 3 ಜಿಆರ್ ಇಎಫ್ ಕಾರ್ಮಿಕರು ಮೃತಪಟ್ಟಿದ್ದಾರೆ.
ಬಟ್ಟಾಲ್ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿಯಲ್ಲಿ ಭಯೋತ್ಪಾದಕ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜ.9 ರಂದು ಉಗ್ರರ ದಾಳಿ ನಡೆದಿದ್ದು, ಭದ್ರತಾ ಪಡೆ ಸಿಬ್ಬಂದಿಗಳು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಧಾವಿಸಿದ್ದಾರೆ.
ಜಿಆರ್ ಇ ಎಫ್ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಗೆ ಮುಖ್ಯ ಸಂಸ್ಥೆಯಾಗಿದ್ದು, ಗಡಿ ಪ್ರದೇಶದಲ್ಲಿರುವ ರಸ್ತೆಗಳನ್ನು ನಿರ್ಮಿಸಿ ನಿರ್ವಹಿಸುವ ಜವಾಬ್ದಾರಿ ಹೊಂದಿದೆ.