ಬಿಎಸ್ಎಫ್ ಯೋಧ ತೇಜ್ ಬಹುದ್ದೂರ್ ಹಾಗೂ ಅವರ ಪತ್ನಿ ಶರ್ಮಿಳಾ 
ದೇಶ

ತೇಜ್ ಬಹದ್ದೂರ್ ಸತ್ಯವನ್ನೇ ಬಹಿರಂಗಪಡಿಸಿದ್ದಾರೆ: ಯೋಧನ ಬೆಂಬಲಕ್ಕೆ ನಿಂತ ಕುಟುಂಬಸ್ಥರು

ಹಿರಿಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆಂದು ಆರೋಪಿಸಿ ಸೇನಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಿಎಸ್ಎಫ್ ಯೋಧ ತೇಜ್ ಬಹುದ್ದೂರ್ ಬೆಂಬಲಕ್ಕೆ ಇದೀಗ ಅವರ ಕುಟುಂಬಸ್ಥರು ಬಂದಿದ್ದು, ಯೋಧರ ಸತ್ಯವನ್ನೇ ಬಹಿರಂಗಪಡಿಸಿದ್ದಾರೆಂದು...

ರೆವಾರಿ: ಹಿರಿಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆಂದು ಆರೋಪಿಸಿ ಸೇನಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಬಿಎಸ್ಎಫ್ ಯೋಧ ತೇಜ್ ಬಹುದ್ದೂರ್ ಬೆಂಬಲಕ್ಕೆ ಇದೀಗ ಅವರ ಕುಟುಂಬಸ್ಥರು ಬಂದಿದ್ದು, ಯೋಧರ ಸತ್ಯವನ್ನೇ ಬಹಿರಂಗಪಡಿಸಿದ್ದಾರೆಂದು ಬುಧವಾರ ಹೇಳಿದೆ.

ಯೋಧ ತೇಜ್ ಬಹದ್ದೂರ್ ಅವರ ಪತ್ನಿ ಶರ್ಮಿಳಾ ಅವರು ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ನನ್ನ ಪತಿ ಮಾನಸಿಕ ಸೀಮಿತವನ್ನು ಕಳೆದುಕೊಂಡಿದ್ದಾರೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಒಂದು ವೇಳೆ ಪತಿ ಮಾನಸಿಕವಾಗಿ ಸರಿಯಿಲ್ಲ ಎಂಬುದೇ ಆಗಿದ್ದರೆ, ಅವರನ್ನು ಗಡಿಯಲ್ಲಿ ಏಕೆ ಕರ್ತವ್ಯಕ್ಕೆ ನಿಯೋಜಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ಸೇನಾ ಯೋಧರ ಕಲ್ಯಾಣಕ್ಕಾಗಿ ನನ್ನ ಪತಿ ಏನು ಮಾಡಿದ್ದಾರೋ ಅದು ಸರಿಯಿದ. ಆಹಾರ ಬೇಕೆಂದು ಆಗ್ರಹಿಸಿರುವುದು ತಪ್ಪಲ್ಲ. ನನ್ನ ಪತಿ ಸತ್ಯವನ್ನೇ ಬಹಿರಂಗಪಡಿಸಿದ್ದಾರೆ. ಆದರೆ, ಅವರು ಮಾನಸಿಕ ಸೀಮಿತವನ್ನು ಕಳೆದುಕೊಂಡಿದ್ದಾರೆಂದು ಹೇಳುತ್ತಿರುವುದು ಸರಿಯಲ್ಲ. ಪತಿ ಮಾನಸಿಕವಾಗಿ ಸರಿಯಿಲ್ಲ ಎಂದು ಹೇಳುವ ಅಧಿಕಾರಿಗಳು ಅವರನ್ನೇಕೆ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕಿತ್ತು?...ಸರ್ಕಾರ ಕೂಡಲೇ ಪ್ರಕರಣ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ನನ್ನ ಪತಿಗೆ ನ್ಯಾಯಕೊಡಿಸಬೇಕೆಂದು ಆಗ್ರಹಿಸಿದ್ದಾರೆ.

ಇನ್ನ ತೇಜ್ ಬಹದ್ದೂರ್ ಅವರ ಮಗ ರೋಹಿತ್ ಕೂಡ ತಂದೆಗೆ ಬೆಂಬಲ ವ್ಯಕ್ತಪಡಿಸಿದ್ದು, ನನ್ನ ತಂದೆ ಗುಣಮಟ್ಟದ ಆಹಾರಕ್ಕಾಗಿ ಅಷ್ಟೇ ಆಗ್ರಹ ಮಾಡಿದ್ದರು. ಭ್ರಷ್ಟರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ವಿಚಾರ ಬಹಿರಂಗಗೊಂಡಾಗಿನಿಂದ ತಂದೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಮಂಗಳಾರ ಸಂಜೆಯಿಂದಲೇ ಅವರ ಸಂಪರ್ಕವನ್ನು ಕಳೆದುಕೊಂಡಿದ್ದೇವೆ. ಅವರನ್ನು ಎಲ್ಲಿ ಹಾಗೂ ಯಾವ ಕಾರಣಕ್ಕಾಗಿ ಅವರನ್ನು ಇರಿಸಿದ್ದಾರೆಂಬುದು ತಿಳಿಯುತ್ತಿಲ್ಲ. ಅವರು ಏನು ಮಾಡುತ್ತಿದ್ದಾರೆ, ಚೆನ್ನಾಗಿದ್ದಾರೆಯೋ, ಇಲ್ಲವೋ ಎಂಬುದನ್ನು ತಿಳಿಯಬೇಕಿದೆ. ಪ್ರಕರಣ ಸಂಬಂಧ ಸರ್ಕಾರ ನ್ಯಾಯಯುತವಾಗಿ ತನಿಖೆ ನಡೆಸಬೇಕಿದೆ ಎಂದು ಹೇಳಿಕೊಂಡಿದ್ದಾರೆ.

ಗಡಿ ಕಾಯುವ ಯೋಧರಿಗೆ ಅಧಿಕಾರಿಗಳು ನೀಡುತ್ತಿರುವ ಕಳಪೆ ಗುಣಮಟ್ಟದ ಆಹಾರ ಕುರಿತಂತೆ ಬಿಎಸ್ ಎಫ್ ಯೋಧರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿ, ತಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಹೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು, ಅಧಿಕಾರಿಗಳ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗತೊಡಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿತ್ತು, ಅಲ್ಲದೆ, ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ