ಆರ್ ಬಿಐ 
ದೇಶ

ಸರ್ಕಾರದ ಸಲಹೆ ನಂತರ ನೋಟು ಅಮಾನ್ಯ ಅನುಷ್ಠಾನ : ಸಂಸತ್ ಸಮಿತಿಗೆ ಆರ್ ಬಿಐ ಪತ್ರ

ಸಾರ್ವಜನಿಕ ವಲಯದಲ್ಲಿರುವ ಅಭಿಪ್ರಾಯಕ್ಕೆ ತದ್ವಿರುದ್ಧವೆಂಬಂತೆ 500, 1000 ರೂ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಲು ಆರ್ ಬಿಐಗೆ ಸಲಹೆ ಕೊಟ್ಟಿದ್ದು ಸರ್ಕಾರವೆಂಬ ಮಾಹಿತಿ ಬಹಿರಂಗವಾಗಿದೆ.

ನವದೆಹಲಿ: ಸಾರ್ವಜನಿಕ ವಲಯದಲ್ಲಿರುವ ಅಭಿಪ್ರಾಯಕ್ಕೆ ತದ್ವಿರುದ್ಧವೆಂಬಂತೆ 500, 1000 ರೂ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಲು ಆರ್ ಬಿಐಗೆ ಸಲಹೆ ಕೊಟ್ಟಿದ್ದು ಸರ್ಕಾರವೆಂಬ ಮಾಹಿತಿ ಬಹಿರಂಗವಾಗಿದೆ. 
ಸರ್ಕಾರ ಸಲಹೆ ನೀಡಿದ ಮರು ದಿನವೇ ಆರ್ ಬಿಐ ನೋಟು ಅಮಾನ್ಯಕ್ಕೆ ಶಿಫಾರಸು ಮಾಡಿದ್ದು ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೋಯ್ಲಿ ನೇತೃತ್ವದ ಸಂಸತ್ ನ ಹಣಕಾಸು ಸಮಿತಿಗೆ ನೀಡಲಾಗಿರುವ 7  ಪುಟಗಳ ಪತ್ರದಲ್ಲಿ ತಿಳಿಸಲಾಗಿದೆ. 
"ಭಯೋತ್ಪಾದಕರಿಗೆ ಸಿಗುತ್ತಿರುವ ಆರ್ಥಿಕ ನೆರವು, ನಕಲಿ ನೋಟುಗಳು ಕಪ್ಪುಹಣ ಮತ್ತು ತಡೆಯುವುದಕ್ಕೆ 1000, 500 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಲು ಕೇಂದ್ರ ಸರ್ಕಾರ ಸಲಹೆ ನೀಡಿತ್ತು. ಕೇಂದ್ರ ಸರ್ಕಾರದ ಸಲಹೆಯಂತೆ ನೋಟು ಅಮಾನ್ಯದ ತೀರ್ಮಾನವನ್ನು ಶಿಫಾಸು ಮಾಡಿ, ಸರ್ಕಾರದ ನಿರ್ಧಾರವನ್ನು ಪಾಲಿಸಲಾಗಿದೆ ಎಂದು ಸಂಸತ್ ನ ಹಣಕಾಸು ಸಮಿತಿಗೆ ನೀಡಲಾಗಿರುವ ಪತ್ರದಲ್ಲಿ ಆರ್ ಬಿಐ ತಿಳಿಸಿದೆ. ಆರ್ ಬಿಐ ಶಿಫಾರಸ್ಸಿನ ಕೆಲವೇ ಗಂಟೆಗಳಲ್ಲಿ ನರೇಂದ್ರ ಮೋದಿ ಸಂಪುಟ ಸಭೆ ಕರೆದು ನ.8 ರಂದು ನೋಟು ಅಮಾನ್ಯದ ನಿರ್ಧಾರವನ್ನು ಘೋಷಿಸಿದರು ಎಂದು ಪತ್ರದಲ್ಲಿ ಹೇಳಲಾಗಿದೆ. 
ನೋಟು ನಿಷೇಧದ ಉದ್ದೇಶ ಪ್ರಾರಂಭದಲ್ಲಿ ಇರಲಿಲ್ಲವಾದರೂ, ಕೆಲವು ವರ್ಷಗಳಿಂದ ಹೊಸ ಮಾದರಿಯ ನೋಟುಗಳನ್ನು ಪರಿಚಯಿಸಲು ಸಿದ್ಧತೆ ನಡೆದಿತ್ತು. 2014 ರ ಅಕ್ಟೋಬರ್ 7 ರಂದು ಕೇಂದ್ರ ಸರ್ಕಾರಕ್ಕೆ ಆರ್ ಬಿಐ ಸಲ್ಲಿಸಿದ್ದ ಶಿಫಾರಸಿನಲ್ಲಿ, ಹಣದುಬ್ಬರ ಕಡಿಮೆ ಮಾಡಲು 5,000 10,000  ರೂ ನೋಟುಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಹೇಳಿತ್ತು. ಆದರೆ ಕೇಂದ್ರ ಸರ್ಕಾರ 2016 ರ ಮೇ.18 ರಂದು 2000 ರೂ ನೋಟುಗಳನ್ನು ಪರಿಚಯಿಸಲು ಒಪ್ಪಿಗೆ ಸೂಚಿಸಿತ್ತು, ನಂತರ ನೋಟುಗಳನ್ನು ಹೊಸ ಬಣ್ಣ, ಹೊಸ ವಿನ್ಯಾಸದಲ್ಲಿ, ಹೊಸ ಅಳತೆಯಲ್ಲಿ ಪರಿಚಯಿಸಲು ಆರ್ ಬಿಐ ಕೇಂದ್ರ ಸರ್ಕಾರಕ್ಕೆ ಮೇ 27 ರಂದು ಶಿಫಾರಸು ಮಾಡಿದ್ದಕ್ಕೆ ಜೂ.7 ರಂದು ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿತ್ತು ಎಂದು ಆರ್ ಬಿಐ ಪತ್ರದಲ್ಲಿ ತಿಳಿಸಿದೆ. 
ನೋಟ್ ನಿಷಧಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌(ಆರ್ ಬಿಐ) ಸಂಸತ್ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಗೆ ನೀಡಿರುವ ವಿವರಣೆ ತೃಪ್ತಿಕರವಲ್ಲದಿದ್ದರೆ ಪ್ರಧಾನಿ ನರೇಂದ್ರ ಅವರಿಗೆ ಪಿಎಸಿ ವಿವರಣೆ ಕೋರಿ ನೋಟಿಸ್ ನೀಡುವ ಸಾಧ್ಯತೆ ಇದೆ. ಈ ಸಂಬಂಧ ಇದೇ 20ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್, ಹಣಕಾಸು ಕಾರ್ಯದರ್ಶಿ ಅಶೋಕ್ ಲವಸಾ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT