ದೇಶ

21ನೇ ಯುವ ರಾಷ್ಟ್ರೀಯ ಉತ್ಸವ ಆರಂಭ; ಡಿಜಿಟಲ್ ಆರ್ಥಿಕತೆಗೆ ಒತ್ತು

Sumana Upadhyaya
ರೊಹ್ಟಕ್( ಹರ್ಯಾಣ): ಡಿಜಿಟಲ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಅದಕ್ಕೆ ವಿಶೇಷ ಒತ್ತು ನೀಡುವ ಉದ್ದೇಶದಿಂದ 21ನೇ ರಾಷ್ಟ್ರೀಯ ಯುವ ಉತ್ಸವ ಹರ್ಯಾಣದ ರೊಹ್ಟಕ್ ನಲ್ಲಿ ಇಂದು ಆರಂಭಗೊಂಡಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಈ ವರ್ಷದ ಧ್ಯೇಯ ಡಿಜಿಟಲ್ ಭಾರತಕ್ಕೆ ಯುವಕರು ಆಗಿದ್ದು ಇದು ಜನವರಿ 16ಕ್ಕೆ ಮುಕ್ತಾಯಗೊಳ್ಳಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಕ್ರೀಡಾ ಸಚಿವ ವಿಜಯ್ ಗೋಯಲ್ ಕೂಡ ಅತಿಥಿಯಾಗಿ ಭಾಗವಹಿಸಿದ್ದಾರೆ.ಸುವಿಚಾರ್ ಮತ್ತು ಯುವ ಉತ್ಸವದಲ್ಲಿ ಪ್ರಮುಖ ತಜ್ಞರು, ಲೇಖಕರು ಮತ್ತು ಪ್ರೇರಕ ಭಾಷಣಕಾರರು ಭಾಗವಹಿಸಿದ್ದಾರೆ.
ಸರ್ಕಾರದ ಯೋಜನೆಗಳು, ಪ್ರಮುಖ ಕಾರ್ಯಕ್ರಮಗಳು, ಡಿಜಿಟಲ್ ಆರ್ಥಿಕತೆಯ ಬಗ್ಗೆ ಉತ್ಸವದಲ್ಲಿ ವಿಶೇಷ ಪ್ರಚಾರ ನೀಡಲಾಗುತ್ತದೆ. ಆನ್ ಲೈನ್ ನಲ್ಲಿ ಹಣಕಾಸಿನ ವಹಿವಾಟಿಗೆ ಸಾಮೂಹಿಕವಾಗಿ ಜನರಿಗೆ ಶಿಕ್ಷಣ ನೀಡಲಾಗುತ್ತದೆ.
ರೊಹ್ಟಕ್ ನ ಮಹರ್ಶಿ ದಯಾನಂದ ವಿಶ್ವವಿದ್ಯಾಲಯದ ಕ್ರೀಡಾ ಸಂಕೀರ್ಣದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.ಸ್ವಾಮಿ ವಿವೇಕಾನಂದರ ಜಯಂತಿ ದಿನವಾದ ಇಂದು ಯುವ ಉತ್ಸವವನ್ನು ಆಯೋಜಿಸಲಾಗಿದೆ.
SCROLL FOR NEXT