ಕ್ಯಾಲೆಂಡರ್ ನಲ್ಲಿ ನರೇಂದ್ರ ಮೋದಿ
ನವದೆಹಲಿ: ಇದೊಂದು ಅಚ್ಚರಿಯ ಬೆಳವಣಿಗೆ ಎಂಬಂತೆ ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ಪ್ರಕಟಿಸಿರುವ 2017ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಚರಕ ನೂಲುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತ್ರದ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಪ್ರಕಟಗೊಂಡಿದೆ!
ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಮುಖಪುಟದಲ್ಲಿನ ಚಿತ್ರದಲ್ಲಿ ನೂಲು ನೇಯುತ್ತಿರುವ ಪೋಸ್ ನಲ್ಲಿ ಗಾಂಧಿ ಬದಲು ಮೋದಿ ಫೋಟೋ ಇದೆ. ಚರಕದಲ್ಲಿ ನೂಲು ನೇಯುತ್ತಿರುವುದು ಗಾಂಧಿಯ ಐತಿಹಾಸಿಕ ಚಿತ್ರವಾಗಿದೆ. ಅಷ್ಟೇ ಅಲ್ಲ ಗಾಂಧಿಯ ಈ ಚಿತ್ರ ಈಗಲೂ ಜನಮಾನಸದಲ್ಲಿ ಸ್ಥಿರವಾಗಿ ಉಳಿದುಕೊಂಡಿದೆ.
ಆದರೆ ಸದಾ ಖಾದಿ ಕುರ್ತಾ, ಫೈಜಾಮ, ಕೋಟ್ ಧರಿಸುವ ಪ್ರಧಾನಿ ಮೋದಿ ಈಗ ಗಾಂಧಿ ಸ್ಥಾನವನ್ನು ಪಲ್ಲಟಗೊಳಿಸಿ, ಆಧುನಿಕ ಚರಕದ ಮೂಲಕ ಆ ಸ್ಥಳವನ್ನು ತಾವು ಆಕ್ರಮಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆವಿಐಸಿಯ ಅಧ್ಯಕ್ಷ ವಿನಯ್ ಸಕ್ಸೆನಾ, ನಮ್ಮ ಇಡೀ ಖಾದಿ ಉದ್ಯಮ ಗಾಂಧಿ ತತ್ವದ ಮೇಲೆ ಅವಲಂಬಿತವಾಗಿದೆ. ಗಾಂಧಿಯೇ ಕೆವಿಐಸಿಯ ಜೀವಾಳ. ಹಾಗಾಗಿ ಅವರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ಮೋದಿ ಕೂಡಾ ದೀರ್ಘಕಾಲದಿಂದ ಖಾದಿಯನ್ನು ಬಳಸುತ್ತ ಬಂದಿದ್ದಾರೆ. ಅವರಿಂದಾಗಿಯೂ ಖಾದಿ ಹೆಚ್ಚು ಜನಪ್ರಿಯವಾಗತೊಡಗಿದೆ. ಖಾದಿ ಬಗ್ಗೆ ಅವರದ್ದೇ ಆದ ವೈಶಿಷ್ಟ್ಯತೆ ಇದೆ. ಹಾಗಾಗಿ ಮೋದಿ ಖಾದಿಯ ದೊಡ್ಡ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರ ದೂರದರ್ಶಿತ್ವ ಕೆವಿಐಸಿಗೆ ಹೊಂದಾಣಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos