ಔರಂಗಾಬಾದ್(ಬಿಹಾರ): ಸಹೋದ್ಯೋಗಿಗಳ ಮೇಲೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಸಿಬ್ಬಂದಿಯೊಬ್ಬ ಯದ್ವಾತದ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ರಜೆ ಸಿಕ್ಕಿಲ್ಲ ಎಂಬ ಆಕ್ರೋಶದಿಂದಾಗಿ ಸಿಟ್ಟಿಗೆದ್ದ ಪೇದೆಯೊಬ್ಬ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ತನ್ನ ಸೇವಾ ಶಸ್ತ್ರವನ್ನು ಹಿಡಿದುಕೊಂಡು ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡು ಹಾರಿಸಿದ ಪೇದೆಯನ್ನು ಬಲ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ರಜೆ ಸಿಕ್ಕದಿದ್ದರಿಂದ ಆಕ್ರೋಶಗೊಂಡು ತಾನು ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಮೃತ ಯೋಧರನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ಜೆಎಸ್ ರಾಮ್, ಮುಖ್ಯ ಪೇದೆಗಳಾದ ಬಚಾ ಶರ್ಮಾ ಮತ್ತು ಅಮರನಾಥ್ ಮಿಶ್ರಾ ಮತ್ತೊರ್ವನನ್ನು ಹವಲ್ದಾರ್ ಅರವಿಂದ್ ರಾಮ್ ಎಂದು ಗುರುತಿಸಲಾಗಿದೆ.