ಸಂಗ್ರಹ ಚಿತ್ರ 
ದೇಶ

ಖಾದಿ ಕ್ಯಾಲೆಂಡರ್ ವಿವಾದ ಅನವಶ್ಯಕ, ಯಾವುದೇ ವಿವಾದ ಇಲ್ಲ: ಕೇಂದ್ರ ಸರ್ಕಾರ

ಸರ್ಕಾರಿ ಸ್ವಾಮ್ಯದ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯ ಕ್ಯಾಲೆಂಡರ್ ನಲ್ಲಿ ಗಾಂಧಿ ಬದಲಿಗೆ ನರೇಂದ್ರ ಮೋದಿ ಚಿತ್ರ ಪ್ರಕಟ ವಿಚಾರ ವಿವಾದದ ಸ್ವರೂಪ ಪಡೆಯುತ್ತಿರುವಂತೆಯೇ ವಿವಾದಕ್ಕೆ ತೆರೆಎಳೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ.

ನವದೆಹಲಿ: ಸರ್ಕಾರಿ ಸ್ವಾಮ್ಯದ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯ ಕ್ಯಾಲೆಂಡರ್ ನಲ್ಲಿ ಗಾಂಧಿ ಬದಲಿಗೆ ನರೇಂದ್ರ ಮೋದಿ ಚಿತ್ರ ಪ್ರಕಟ ವಿಚಾರ ವಿವಾದದ ಸ್ವರೂಪ ಪಡೆಯುತ್ತಿರುವಂತೆಯೇ ವಿವಾದಕ್ಕೆ ತೆರೆಎಳೆಯುವ  ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ.

ವಿವಾದ ಸಂಬಂಧ ಹೇಳಿಕೆ ಬಿಡುಗಡೆ ಮಾಡದಿದ್ದರೂ ಪ್ರಧಾನ ಮಂತ್ರಿ ಸಚಿವಾಲಯ ಮಾತ್ರ ವಿವಾದ ಅನವಶ್ಯಕವಾಗಿತ್ತು ಎಂದು ಹೇಳಿದೆ. ಖಾದಿ ಮತ್ತು ಗ್ರಾಮೋದ್ಯಗ ಸಂಸ್ಥೆಯ ಕ್ಯಾಲೆಂಡರ್ ನಲ್ಲಿ ಮಹಾತ್ಮ ಗಾಂಧಿ ಚಿತ್ರವೇ  ಇರಬೇಕು ಎಂಬ ನಿಯಮಗಳೇನೂ ಇಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಗಾಂಧಿ ಚಿತ್ರ ರಹಿತ ಕ್ಯಾಲೆಂಡರ್ ಗಳನ್ನು ಬಿಡುಗಡೆ ಮಾಡಲಾಗಿತ್ತು. 1996, 2002, 2005, 2011, 2013, 2016 ರಲ್ಲಿ ಗಾಂಧಿ ಚಿತ್ರ ರಹಿತ ಕ್ಯಾಲೆಂಡರ್  ಬಿಡುಗಡೆಯಾಗಿತ್ತು. ಹೀಗಾಗಿ ಪ್ರಧಾನಿ ಮೋದಿ ಗಾಂಧಿ ಚಿತ್ರವನ್ನು ಡಿಲೀಟ್ ಮಾಡಿ ತಮ್ಮ ಚಿತ್ರ ನೀಡಿದ್ದಾರೆ ಎಂಬ ವಾದದಲ್ಲಿ ಹುರುಳಿಲ್ಲ. ಪ್ರಸ್ತುತ ವಿವಾದ ಅನಗತ್ಯ ಎಂದು ಪಿಎಂಒ ಹೇಳಿದೆ.

ಇನ್ನು ಕಿವಿಐಸಿ ಕ್ಯಾಲೆಂಡರ್ ನಲ್ಲಿ ಮೋದಿ ಚಿತ್ರ ಪ್ರಕಟವಾಗಿರುವುದನ್ನು ಸಂಸ್ಥೆಯ ನೌಕರರೇ ವಿರೋಧಿಸಿದ್ದರು. ಈ ಹಿಂದೆಯೇ ಇಂತಹುದೇ ಚಿತ್ರಗಳು ಪ್ರಕಟಗೊಂಡಾಗ ನೌಕರರು ಹಲವು ಬಾರಿ ಪ್ರತಿಭಟನೆ ಮಾಡಿದ್ದರು.  ನೌಕರರ ಪ್ರತಿಭಟನೆಗೆ ಮಣಿದಿದ್ದ ಆಡಳಿತ ಮಂಡಳಿ ಮುಂದೆ ಇಂತಹ ಪ್ರಮಾದವಾಗುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಇದೀಗ ಮತ್ತದೇ ತಪ್ಪು ಮರುಕಳಿಸಿದೆ ಎಂದು ಹೆಸರು ಹೇಳಲಿಚ್ಛಿಸದ ನೌಕರರೊಬ್ಬರು  ತಿಳಿಸಿದ್ದಾರೆ.

ಇಡೀ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆ ಮಹಾತ್ಮ ಗಾಂಧಿ ಅವರ ತತ್ವಾದರ್ಶಗಳ ಮೇಲೆ ನಡೆಯುತ್ತಿದ್ದು, ಇಂದಿಗೂ ಅದನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಹೀಗಾಗಿ ಇಂತಹ ಪ್ರಕರಣಗಳು ಗಾಂಧಿ ತತ್ವಕ್ಕೆ ಹಿನ್ನಡೆಯನ್ನುಂಟು  ಮಾಡುತ್ತದೆ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ