ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕುಖ್ಯಾತ ಕಿಸ್ಸಿಂಗ್ ಕಿಂಗ್ ಸುಮಿತ್‌ ವರ್ಮಾ, ಆತನ ಸಹಚರನ ಬಂಧನ

ಹಾಡು ಹಗಲೇ ನಡು ರಸ್ತೆಯಲ್ಲಿ ಈತ ಮಹಿಳೆಯರನ್ನು ಬರೆಸೆಳೆದು ಮುತ್ತಿಕ್ಕಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ. ನಟೋರಿಯಸ್ ಕಿಸ್ಸಿಂಗ್...

ಸುಮಿತ್‌ ವರ್ಮಾ
Lingaraj Badiger
Updated On : 13 Jan 2017, 7:32 am
ನವದೆಹಲಿ: ಹಾಡು ಹಗಲೇ ನಡು ರಸ್ತೆಯಲ್ಲಿ  ಈತ ಮಹಿಳೆಯರನ್ನು ಬರೆಸೆಳೆದು ಮುತ್ತಿಕ್ಕಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ. ನಟೋರಿಯಸ್ ಕಿಸ್ಸಿಂಗ್ ಕಿಂಗ್ ಹಾಗೂ ಆತನ ಸಹಚರರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ಕಿರುಕುಳ ಹಾಗೂ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕಿಸ್ಸಿಂಗ್ ಕಿಂಗ್ ಸುಮಿತ್‌ ವರ್ಮಾ ಹಾಗೂ ಆತನ ಸಹಚರ ಸತ್ಯಜೀತ್ ಅವರನ್ನು ಇಂದು ಮಧ್ಯಾಹ್ನ ಗುರ್ಗಾಂವ್‌ ನಲ್ಲಿ ದೆಹಲಿ ಕ್ರೈಮ್‌ ಬ್ರಾಂಚ್‌ ಪೊಲೀಸರು ಬಂಧಿಸಿದ್ದಾರೆ.
ಕ್ರೇಜಿ ಸುಮಿತ್‌ ಎಂದೇ ಕುಖ್ಯಾತನಾಗಿದ್ದ ಈತ ದೆಹಲಿಯಲ್ಲಿ ಮಹಿಳೆಯರಿಗೆ ದುಃಸ್ವಪ್ನವಾಗಿದ್ದ. ಹಾಡು ಹಗಲೇ ನಡು ರಸ್ತೆಯಲ್ಲಿ  ಈತ ಮಹಿಳೆಯರನ್ನು ಬರೆಸೆಳೆದು ಮುತ್ತಿಕ್ಕಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ. ತನ್ನ ಈ ಚುಂಬನ ಚೇಷ್ಟೆಯ ವಿಡಿಯೋಗಳನ್ನು ಆತ ಯೂ ಟ್ಯೂಬ್‌ಗ ಅಪ್‌ಲೋಡ್‌ ಕೂಡ ಮಾಡುತ್ತಿದ್ದ. 

Advertisement

Advertisement

"ದಿ ಫ‌ನ್ನಿಯೆಸ್ಟ್‌ ಇಂಡಿಯನ್‌ ಯೂ ಟ್ಯೂಬ್‌ ಪ್ರ್ಯಾಂಕ್‌ ಆಫ್ 2017' ಎಂಬ ಈತನ ಚುಂಬನ ಚೇಷ್ಟೆಯ ವಿಡಿಯೋಗೆ 200 ಲೈಕ್‌ಗಳು ಸಿಕ್ಕಿದ್ದವು. ವ್ಯಾಪಕವಾಗಿ ವೀಕ್ಷಿಸಲ್ಪಟ್ಟ ಈ ವಿಡಿಯೋಗಳನ್ನು ಹಾಗೂ ಚುಂಬನ ಚೇಷ್ಟೆ ತೋರಿದ ಸುಮಿತ್‌ ವರ್ಮಾನನ್ನು ಜನರು ಸಾಮಾಜಿಕ ಜಾಲ ತಾಣದಲ್ಲಿ ಖಂಡಿಸಿದ್ದರು.
ಜನರ ಈ ಆಕ್ರೋಶದಿಂದ ಬೆದರಿದ್ದ ಸುಮಿತ್‌ ವರ್ಮಾ ತನ್ನ ಚುಂಬನ ಚೇಷ್ಟೆಯ ವಿಡಿಯೋವನ್ನು  ಇಂಟರ್‌ನೆಟ್‌ನಿಂದ ಕಿತ್ತು ಹಾಕಿ ತನ್ನ ಕುಕೃತ್ಯಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments