ದೇಶ

ಉಗ್ರರಿಗೆ ಹಣ ಪೂರೈಕೆ ಶಂಕೆ: ಎನ್ ಐಎ ಯಿಂದ ಗಿಲಾನಿಯ 5 ಬ್ಯಾಂಕ್ ಖಾತೆಗಳ ಪರಿಶೀಲನೆ

Shilpa D

ನವದೆಹಲಿ: ಭಯೋತ್ಪಾದನೆಗೆ ಹಣ ಪೂರೈಕೆ  ಅನುಮಾನದ ಮೇಲೆ ರಾಷ್ಟ್ರೀಯ ತನಿಖಾ ದಳ ಪ್ರತ್ಯೇಕತಾವಾದಿ ಮುಖಂಡ ಸೈಯ್ಯದ್ ಅಲಿ ಶಾ ಗಿಲಾನಿಗೆ ಸೇರಿದ ಐದು ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸುತ್ತಿದೆ.

ಗಿಲಾನಿಗೆ ಸೇರಿದ ಎರಡು ಖಾತೆಗಳು ಹಾಗೂ ಆತನ ಜೊತೆಗೆ ನಂಟಿರುವ ವ್ಯಕ್ತಿಗಳ ಉಳಿದ ಖಾತೆಗಳ ಪರಿಶೀಲನೆ ನಡೆಸುವಂತೆ ತನಿಖಾ ತಂಡ ಆರ್ಥಿಕ ತಜ್ಞರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

2014 ಮತ್ತು 2015 ರಲ್ಲಿ ಈ ಐದು ಖಾತೆಗಳ ಮೂಲಕ ಸಂಶಯಾಸ್ಪದ ಹಣ ವರ್ಗಾವಣೆ ನಡೆದಿದೆ ಎಂದು ಪ್ರಾಥಮಿಕ ತನಿಖೆ ಮೂಲಕ ತಿಳಿದು ಬಂದಿದೆ.

ಈ ಖಾತೆಗಳಿಗೆ ಹಲವು ಬಾರಿ ಹಣ ಡೆಪಾಸಿಟ್ ಆಗಿದೆ, ಹಣ ಕಾಸು ವ್ಯವಹಾರ ಯಾರಿಗೂ ತಿಳಿಯದಂತೆ ಗೌಪ್ಯವಾಗಿಡುವ ಉದ್ದೇಶದಂತೆ ಹಣ ಡೆಪಾಸಿಟ್ ಮಾಡಿದವರ ವಿವರವನ್ನು ರಹಸ್ಯವಾಗಿಡಲಾಗಿದೆ ಎಂದು ಹೇಳಲಾಗಿದೆ.

ಕಾಶ್ಮೀರದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸಲು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣವರ್ಗಾವಣೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. ಈ ಹಣ ಬಳಸಿಕೊಂಡು ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲಾಗಿದೆ ಎಂದು ಕೇಂದ್ರ ತನಿಖಾ ದಳ ಅನುಮಾನ ವ್ಯಕ್ತ ಪಡಿಸಿದೆ.

SCROLL FOR NEXT