ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ 
ದೇಶ

ಮಾನವ ಸರಪಳಿಯಲ್ಲಿ 3 ಕೋಟಿ ಜನ ಭಾಗಿ, ದೇಶಕ್ಕೆ ಇದೊಂದು ಸಂದೇಶ: ನಿತೀಶ್ ಕುಮಾರ್

ಮದ್ಯಪಾನದ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡಲಾಗಿದ್ದ ಮಾನವ ಸರಪಳಿಯಲ್ಲಿ 3 ಕೋಟಿ ಜನರು ಪಾಲ್ಗೊಂಡಿದ್ದು, ಅಭಿಯಾನ ಯಶಸ್ವಿಯಾಗಿದ್ದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯದ ಜನತೆಯನ್ನು...

ಪಾಟ್ನ: ಮದ್ಯಪಾನದ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡಲಾಗಿದ್ದ ಮಾನವ ಸರಪಳಿಯಲ್ಲಿ 3 ಕೋಟಿ ಜನರು ಪಾಲ್ಗೊಂಡಿದ್ದು, ಅಭಿಯಾನ ಯಶಸ್ವಿಯಾಗಿದ್ದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯದ ಜನತೆಯನ್ನು ಶ್ಲಾಘಿಸಿದ್ದಾರೆ.

ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಹಾರ ರಾಜ್ಯದಲ್ಲಿ ಮಾನವ ಸರಪಳಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಈ ಅಭಿಯಾನಕ್ಕೆ ಬಿಹಾರ ರಾಜ್ಯದ ಜನತೆ ಮತ್ತು ರಾಜಕಾರಣಿಗಳು ಪಕ್ಷಭೇಧ ಮರೆತು ಮುಖ್ಯಂತ್ರಿ ನಿತೀಶ್ ಕುಮಾರ್ ಅವರ ಜೊತೆ ಕೈಜೋಡಿಸಿದ್ದರು. ನಿನ್ನೆ ನಡೆದ ಈ ಅಭಿಯಾನದಲ್ಲಿ 3 ಕೋಟಿ ಜನರು ಭಾಗಿಯಾಗಿ ವಿಶ್ವದ ಅತೀ ದೊಡ್ಡ ಮಾನವ ಸರಪಳಿಯನ್ನು ನಿರ್ಮಿಸಿದ್ದರು.

ಬಿಹಾರ ರಾಜ್ಯದ ಗಾಂಧಿ ಮೈದಾನದಲ್ಲಿ ನಿನ್ನೆ ಬಣ್ಣಬಣ್ಣದ ಬಲೂನ್ ಗಳನ್ನು ಹಾರಿಬಿಟ್ಟ ನಿತೀಶ್ ಕುಮಾರ್ ಅವರು ಮಾನವ ಸರಪಳಿಗೆ ಚಾಲನೆ ನೀಡಿದ್ದರು. ಈ ವೇಳೆ ಪಕ್ಷಭೇದವನ್ನು ಮರೆತು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ರಾಜ್ಯ ವಿಧಾನಸಭೆಯ ಸ್ಪೀಕರ್ ವಿಜಯ್ ಕುಮಾರ್ ಚೌಧರಿಯವರು ನಿತೀಶ್ ಕುಮಾರ್ ಅವರ ಕೈ ಹಿಡಿದು ಸರಪಳಿಯಲ್ಲಿ ಭಾಗಿಯಾದರು. ಇಲ್ಲದೆ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ವಿಧಾನ ಪರಿಷತ್ ಅಧ್ಯಕ್ಷ ಅದ್ವೇಶ್ ನಾಯರಣ್ ಸಿಂಗ್, ರಾಜ್ಯ ಕಾಂಗ್ರೆಸ್ ನಾಯಕ ಮತ್ತು ಸಚಿವ ಅಶೋಕ್ ಚೌಧರಿ ಸೇರಿದಂತೆ ಹಲವಾರು ಸಚಿವರು, ಶಾಸಕರೂ ಕೂಡ ಮಾನವ ಸರಪಳಿಗೆ ಕೊಂಡಿಯಾದರು.

ಮಾನವ ಸರಪಳಿ ಸೃಷ್ಟಿಸಿವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಬಿಹಾರ ಜನತೆಯನ್ನು ನಿತೀಶ್ ಕುಮಾರ್ ಅವರು ಶ್ಲಾಘಿಸಿದ್ದಾರೆ. 11,292 ಕಿಮೀ ವರೆಗೂ 2 ಕೋಟಿಗೂ ಅಧಿಕ ಜನರು ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದರು. 3ಕೋಟಿಗೂ ಹೆಚ್ಚು ಜನರು ಬೀದಿಬೀದಿಗಳಲ್ಲಿ ನಿಂತು ಅಭಿಯಾನಕ್ಕೆ ಕೈಜೋಡಿಸಿದರು.

ಇದೊಂದು ಐತಿಹಾಸಿಕ ದಿನವಾಗಿದೆ. ನಿರೀಕ್ಷೆಗೂ ಮೀರಿ ಜನರು ಮದ್ಯಪಾನದ ವಿರುದ್ಧ ನಡೆಸಲಾದ ಅಭಿಯಾನಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಭಿಯಾನ ಇಂದು ಯಶಸ್ವಿಯಾಗಿದೆ. ಈ ಹಿಂದೆ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ದಾಖಲೆ ಮಾಡಲಾಗಿತ್ತು. ಅವರು ಇತರೆ ವಿಚಾರಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾನವ ಸರಪಳಿಯನ್ನು ನಿರ್ಮಿಸಿದ್ದರು. ಆದರೆ, ನಮ್ಮ ರಾಜ್ಯ ಉತ್ತಮ ಸಮಾಜಕ್ಕಾಗಿ ಮಾನವ ಸರಪಳಿಯನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ.
 
ಇದೊಂದು ಅತೀದೊಡ್ಡ ಪರಿಣಾಮಕಾರಿಯಾಗಲಿದೆ. ಆದಾಯಕ್ಕೆ ಧಕ್ಕೆಯುಂಟಾಗುತ್ತದೆ ಎಂಬುದನ್ನು ಆಲೋಚಿಸುತ್ತಿರುವ ಇತರೆ ರಾಜ್ಯದಳಿಗೆ ಬಿಹಾರ ರಾಜ್ಯದ ದಿಟ್ಟ ಹೆಜ್ಜೆ ಪಾಠವಾಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ಶಾಂತಿ ಒಪ್ಪಂದದತ್ತ ಅಮೆರಿಕಾ; ಅಣ್ವಸ್ತ್ರ ತ್ಯಜಿಸಲು ಒಪ್ಪಿದ ಟೆಹ್ರಾನ್, ಟ್ರಂಪ್ ಮಹತ್ವದ ಹೇಳಿಕೆ..!

ಭಾರತೀಯ ಸೇನೆಗೆ ಹೊಸ ಸಾರಥಿ: CDS ಆಗಿ ಎನ್‌ಎಸ್ ರಾಜಾ ಸುಬ್ರಮಣಿ ಅಧಿಕಾರ ಸ್ವೀಕಾರ..!

US-Iran war: ಶಾಂತಿ ಕರಡು ಪ್ರತಿಗೆ ತಿದ್ದುಪಡಿ: ಪರಮಾಣು ಮುಕ್ತ ಇರಾನ್‌ಗೆ ಟ್ರಂಪ್ ಪಟ್ಟು, ಕೊನೆ ಕ್ಷಣದಲ್ಲಿ ಬಿಗ್ ಶಾಕ್ ಕೊಟ್ಟ ಅಮೆರಿಕಾ..!

ರೂ.1,413 ಕೋಟಿ ಆಸ್ತಿ, ರೂ.900 ಕೋಟಿಯ ಮಾಲ್.. ಆದ್ರೆ ನಮ್ಮ ಮುಂದಿನ ಸಿಎಂ ಡಿಕೆಶಿ ಹೆಸರಲ್ಲಿರೋದು ಒಂದೇ ಒಂದು ಹಳೇ ಕ್ವಾಲಿಸ್ ಕಾರ್..!

ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಭಾರೀ ಕಸರತ್ತು: ಸಿದ್ದು-ಡಿಕೆಶಿ ಬಣ ಸಮತೋಲನಕ್ಕೆ ಮಾಸ್ಟರ್‌ಪ್ಲ್ಯಾನ್, 11:11:11 ಫಾರ್ಮುಲಾಗೆ ಹೈಕಮಾಂಡ್ ಗ್ರೀನ್ ಸಿಗ್ನಲ್..?

SCROLL FOR NEXT