ದೇಶ

ವಾರದೊಳಗೆ ಎನ್ ಎಚ್ ಆರ್ ಸಿ ಗೆ ಡಿಜಿ ನೇಮಿಸಿ: ಸುಪ್ರೀಂಕೋರ್ಟ್

Shilpa D

ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಒಂದು ವಾರದೊಳಗೆ ಪ್ರಧಾನ ನಿರ್ದೇಶಕರನ್ನು ನೇಮಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಕೇಹರ್ ನೇತೃತ್ವದ ನ್ಯಾಯಪೀಠ ಒಂದು ವಾರದೊಳಗೆ ಎನ್ ಎಚ್ ಆರ್ ಸಿಗೆ ಪ್ರಧಾನ ನಿರ್ದೇಶಕರ ನೇಮಕ ಹಾಗೂ ನಾಲ್ಕು ವಾರದೊಳಗೆ ಆಯೋಗದ ಸದಸ್ಯರನ್ನು ನೇಮಿಸಬೇಕು ಎಂದು ಸೂಚಿಸಿದೆ.

ನೀವು ಈ ವಿಷಯದಲ್ಲಿ ಸಮಸ್ಯೆ ಹೊಂದಿದ್ದರೇ ನಾವು ವಿಚಾರಣೆ ಆರಂಭಿಸಿ ಕೆಲವು ಆದೇಶಗಳನ್ನು ಪಾಸು ಮಾಡುತ್ತೇವೆ, ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನು ನೇಮಿಸಲು ನಾಲ್ಕು ವಾರಗಳ ಗಡುವು ನೀಡುತ್ತೇವೆ, ಅಷ್ಟೊರೊಳಗೆ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ಪೀಠ ತಿಳಿಸಿದೆ.

ನೇಮಕಕ್ಕೆ ನಾವು ಹೆಚ್ಚಿನ ಸಮಯಾವಕಾಶ ನೀಡಲು ಸಾಧ್ಯವಿಲ್ಲ, ಏತಕ್ಕಾಗಿ ನೀವು ನೇಮಕಾತಿ ಮಾಡುತ್ತಿಲ್ಲ ಎಂದು ವಿಚಾರಣೆ ಆರಂಭಕ್ಕೂ ಮುನ್ನ ನ್ಯಾಯಪೀಠ ಪ್ರಶ್ನಿಸಿತು. ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡಲು ಮೂರು ವಾರ ಗಡುವು ನೀಡುತ್ತೇವೆ, ಒಂದು ವಾರದೊಳಗೆ ಡಿಜಿ ಅವರನ್ನು ನೇಮಕ ಮಾಡಬೇಕೆಂದು ಹೇಳಿದೆ. ಆಯೋಗಕ್ಕೆ ಡಿಜಿ ಹಾಗೂ ಸದಸ್ಯರನ್ನು ನೇಮಿಸಲು ಕೇಂದ್ರ ಸರ್ಕಾರ ಸಮಯ ಕೋರಿತ್ತು.

SCROLL FOR NEXT