ದೇಶ

ರೋಹಿತ್ ವೇಮುಲ ಸಾವಿನ ವರದಿ: ಆರ್ ಟಿ ಐ ಅರ್ಜಿ ತಿರಸ್ಕರಿಸಿದ ಮಾನವ ಸಂಪನ್ಮೂಲ ಇಲಾಖೆ

Shilpa D

ನವದೆಹಲಿ: ಪಿಎಚ್ ಡಿ ಸಂಶೋಧಕ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಸಂಬಂಧ ಸಮಿತಿ ತಯಾರಿಸಿರುವ ವರದಿಯನ್ನು ಬಹಿರಂಗ ಗೊಳಿಸುಂವಂತೆ ಸಲ್ಲಿಸಿದ್ದ ಅರ್ಟಿ ಐ ಅರ್ಜಿಯನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ತಿರಸ್ಕರಿಸಿದೆ.

ವರದಿ ಇನ್ನೂ ಸಲ್ಲಿಕೆ ಹಂತದಲ್ಲಿದ್ದು, ವರದಿಯ ಪ್ರತಿಯನ್ನು ಯಾವುದೇ ಕಾರಣಕ್ಕೂ ಒದಗಿಸಲು ಸಾಧ್ಯವಿಲ್ಲ ಎಂದು ಮಾನವಸಂಪನ್ಮೂಲ ಇಲಾಖೆ ಪ್ರತಿಕ್ರಿಯಿಸಿದೆ.

ಪ್ರಥಮ ಮೇಲ್ಮನವಿ ಪ್ರಾಧಿಕಾರ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕೇಂದ್ರ ಮಾಹಿತಿ ಹಕ್ಕು ಆಯೋಗ ನೀಡಿದ್ದ ಪ್ರತಿಕ್ರಿಯೆಯಲ್ಲಿ ನಮಗೆ ಯಾವುದೇ ಲೋಪದೋಷಗಳು ಕಂಡು ಬಂದಿಲ್ಲ. ಪ್ರಥಮ ಮೇಲ್ಮನವಿ ಪ್ರಾಧಿಕಾರ ನಿಮ್ಮ ಅಪೀಲನ್ನು ವಿಲೇವಾರಿ ಮಾಡಬಹುದಾಗಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ.

ಹೈದರಾಬಾದ್ ವಿವಿ ಸಂಶೋಧಕ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಕಳೆದ ವರ್ಷ ಫೆಬ್ರವರಿಯಲ್ಲಿ ಎಚ್ ಆರ್ ಡಿ ಸಚಿವಾಲಯ ನ್ಯಾ. ಅಶೋಕ್ ಕುಮಾರ್ ರೂಪನ್ ವಾಲ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

SCROLL FOR NEXT