ಹಳಿ ತಪ್ಪಿದ್ದ ಹಿರಾಕುಂಡ್ ಎಕ್ಸ್ ಪ್ರೆಸ್ 
ದೇಶ

ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ ವಯಸ್ಕ ಮಕ್ಕಳನ್ನು ಕಳೆದುಕೊಂಡ ತಾಯಿ

ಆಂಧ್ರಪ್ರದೇಶದ ವಿಜಯನಗರಂನಲ್ಲಿ ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ 40 ವರ್ಷದ ...

ಕೋರಾಪುಟ್:  ಆಂಧ್ರಪ್ರದೇಶದ ವಿಜಯನಗರಂನಲ್ಲಿ  ಜಗದಲ್ ಪುರ-ಭುವನೇಶ್ವರ ನಡುವೆ ಸಂಚರಿಸುತ್ತಿದ್ದ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ದುರಂತದಲ್ಲಿ 40 ವರ್ಷದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದಾರೆ.

ಜಶೋದಾ ಎಂಬ ಮಹಿಳೆ ತಮ್ಮ ಇಬ್ಬರು ಮಕ್ಕಳ ಜೊತೆ ಜನವರಿ 21 ರಂದು ಆಂಧ್ರಪ್ರದೇಶಕ್ಕೆ ಸಂಚರಿಸುತ್ತಿದ್ದರು. ಈ ವೇಳೆ ಸಂಭವಿಸಿದ ರೈಲು ದುರಂತದಲ್ಲಿ ಜಶೋದಾ ಅವರು ತಮ್ಮ 16 ವರ್ಷದ ಮಗಳು ಹಾಗೂ 18 ವರ್ಷದ ಮಗನನ್ನು  ಕಳೆದುಕೊಂಡಿದ್ದಾರೆ.

ಮತ್ತೊಂದು ದುರಾದೃಷ್ಟವೆಂದರೆ ಕಳೆದ ವರ್ಷ ಜನವರಿ 22 ರಂದು ಸಂಭವಿಸಿದ ರೈಲು ದುರಂತದಲ್ಲಿ ಜಶೋದಾ ತಮ್ಮ ಪತಿಯನ್ನು ಕಳೆದು ಕೊಂಡಿದ್ದರು. ತಮ್ಮ ಇಬ್ಬರು ಮಕ್ಕಳೊಂದಿಗೆ ಜಶೋದಾ ವಿಜಯನಗರಂ ನಲ್ಲಿರುವ ತಮ್ಮ ಪೋಶಕರ ಮನೆಗೆ ತೆರಳುತ್ತಿದ್ದರು.

ಜುನಾಘರ್-ಭುವನೇಶ್ವರ್ ಎಕ್ಸ್ ಪ್ರೆಸೆ ರೈಲಿನ ಜನರಲ್ ಬೋಗಿಯಲ್ಲಿ ಈ ಕುಟುಂಬ ಟಿಕೆಟ್ ಪಡೆದಿತ್ತು, ಸುಮಾರು ರಾತ್ರಿ 9.30 ರ ಸುಮಾರಿಗೆ ರೈಲು ರಾಯಘಡ ರೈಲು ನಿಲ್ದಾಣ ತಲುಪಿದೆ. ವಿಜಯನಗರಂ ತಲುಪುವ ವೇಳೆಗೆ ಅಲಾರಂ ನಿಲ್ಲಿಸಿದ ಕುಟುಂಬ ರಾತ್ರಿ ಊಟ ಮುಗಿಸಿ ಸ್ವಲ್ಪ ಹೊತ್ತು ಹರಟಿ ನಂತರ ನಿದ್ರೆಗೆ ಜಾರಿದ್ದೆವು ಎಂದು ಜಶೋದಾ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

20 ನಿಮಿಷಗಳ ನಂತರ ರೈಲು ರಾಯಘಡ ನಿಲ್ದಾಣದಿಂದ ಹೊರಟಿತ್ತು. ಜೋರಾದ ಶಬ್ದ ಕೇಳಿ ನಾನು ಎಚ್ಚರಗೊಂಡೆ, ರೈಲಿಗೆ ಯಾರೋ ಕಲ್ಲು ಹೊಡೆಯುತ್ತಿದ್ದಾರೆ ಎಂದು ನಾನು ತಿಳಿದುಕೊಂಡೆ, ಕೂಡಲೇ ರೈಲು ಹಳಿ ತಪ್ಪಿದೆ ಎಂದು ನನಗೆ ತಿಳಿಯಿತು ಎಂದು ನನಗೆ ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.

ಎಲ್ಲಾ ಕಡೆ ಕೂಗಾಟ ಕೇಳಿತು, ನಾನು ಬೋಗಿಯಿಂದ ಹೊರಬಂದು ನನ್ನ ಮಕ್ಕಳಿಗಾಗಿ ಕಾಯುತ್ತಾ ನಿಂತೆ, ಆದರೆ ಅವರು ಬರಲೇ ಇಲ್ಲ ಎಂದು ಗದ್ಗದಿತರಾದರು. ರೈಲು ಹಳಿ ದುರಂತದಲ್ಲಿ ತಮ್ಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದನ್ನು ಜಶೋದಾ ನೆನಪಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!