ಸಂಗ್ರಹ ಚಿತ್ರ 
ದೇಶ

ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣ: ಫೆಬ್ರವರಿ 2ಕ್ಕೆ ತೀರ್ಪು

2ಜಿ ತರಂಗಾಂತರ ಹಂಚಿಕೆ ವಿವಾದದ ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣದ ತೀರ್ಪನ್ನು ಇದೇ ಫೆಬ್ರವರಿ 2ರಂದು ನೀಡುವುದಾಗಿ ವಿಶೇಷ ನ್ಯಾಯಾಲಯ ಮಂಗಳವಾರ ಹೇಳಿದೆ.

ನವದೆಹಲಿ: 2ಜಿ ತರಂಗಾಂತರ ಹಂಚಿಕೆ ವಿವಾದದ ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣದ ತೀರ್ಪನ್ನು ಇದೇ ಫೆಬ್ರವರಿ 2ರಂದು ನೀಡುವುದಾಗಿ ವಿಶೇಷ ನ್ಯಾಯಾಲಯ ಮಂಗಳವಾರ ಹೇಳಿದೆ.

ಮಾಜಿ ಕೇಂದ್ರ ಸಚಿವ ದಯಾನಿದಿ ಮಾರನ್ ಮತ್ತು ಅವರ ಸಹೋದರ ಕಲಾನಿಧಿ ಮಾರನ್ ರ ಪಾತ್ರವಿರುವ ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಇದೇ ಫೆಬ್ರವರಿ 2ರಂದು ತೀರ್ಪು ನೀಡುವುದಾಗಿ  ವಿಶೇಷ ನ್ಯಾಯಾಲಯ ಹೇಳಿದೆ. ಇಂದು ನಡೆದ ವಿಚಾರಣೆಯಲ್ಲಿ ತೀರ್ಪು ನೀಡುವ ಕುರಿತು ನ್ಯಾಯಮೂರ್ತಿ ಓಪಿ ಸೈನಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಫೆಬ್ರವರಿ 2ರಂದು ಪ್ರಕರಣದ ತೀರ್ಪು ಘೋಷಣೆ ಮಾಡುವುದಾಗಿ  ಹೇಳಿದ್ದಾರೆ. ಅಂತೆಯೇ ಮಾರನ್ ಸಹೋದರರು ಮತ್ತು ಪ್ರಕರಣದ ಇತರೆ ಆರೋಪಿಗಳ ಜಾಮೀನು ಅರ್ಜಿಯನ್ನು ಮಾರನೆಯ ದಿನ ಅಂದರೆ ಫೆಬ್ರವರಿ 3ರಂದು ವಿಚಾರಣೆ ನಡೆಸಲಾಗುವುದು ಎಂದು ಓಪಿ ಸೈನಿ ಹೇಳಿದ್ದಾರೆ.

ಮಲೇಷ್ಯಾದ ಟೆಲಿಕಾಂ ಕಂಪೆನಿಯಿಂದ ಮಾರನ್ ಅವರು ಸುಮಾರು 547 ಕೋಟಿ ರುಪಾಯಿ ಲಂಚ ಪಡೆದು, ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಆದರೆ ಈ ಆರೋಪಗಳನ್ನು ಮಾರನ್  ಅಲ್ಲಗಳೆದಿದ್ದಾರೆ. ಏರ್‌ಸೆಲ್ ಮ್ಯಾಕ್ಸಿಸ್‌'ನ ಹಣಕಾಸು ವ್ಯವಹಾರಗಳನ್ನು ಪರಿಶೀಲನೆ ನಡೆಸುತ್ತಿರುವ ತನಿಖಾ ಸಂಸ್ಥೆ ಬ್ರಿಟನ್ ಮತ್ತು ಕೆರಿಬಿಯನ್ ದೇಶವಾದ ಬರ್ಮುಡಾಗಳಿಂದ ಭಾರತದ ಕಂಪೆನಿಗಳಿಗೆ ಹಣಕಾಸು ವ್ಯವಹಾರ  ನಡೆದಿರುವುದನ್ನು ಪತ್ತೆ ಮಾಡಿತ್ತು. ಈ ಸಂಸ್ಥೆಗಳ ಹಣಕಾಸಿನ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ನ್ಯಾಯಾಂಗದ ಮೂಲಕವೇ ಮನವಿ ಕಳುಹಿಸಲು ನಿರ್ಧರಿಸಲಾಗಿತ್ತು. ಬರ್ಮುಡಾ, ಬ್ರಿಟನ್ ಅಲ್ಲದೇ, ಮಲೇಷ್ಯಾ ಮತ್ತು  ಮಾರಿಷಸ್‌'ಗಳಿಗೂ ಸಿಬಿಐ ಇಂತಹದೇ ಮನವಿ ಮಾಡಿತ್ತು.

ದಯಾನಿಧಿ ಮಾರನ್ ಜತೆಗೆ ಅವರ ಸಹೋದರ ಹಾಗೂ ಸನ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಕಲಾನಿಧಿ ಮಾರನ್, ಮ್ಯಾಕ್ಸಿಸ್ ಕಮ್ಯುನಿಕೇಷನ್ ಅಧ್ಯಕ್ಷ ಟಿ.ಆನಂದ ಕೃಷ್ಣ, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್‌ನ ಹಿರಿಯ  ಅಧಿಕಾರಿ ರಾಲ್ಫ್  ಮಾರ್ಷಲ್, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್, ಸನ್ ಟಿವಿ ಮತ್ತು ಮ್ಯಾಕ್ಸಿಸ್ ಕಮ್ಯುನಿಕೇಷನ್ ಕಂಪೆನಿಗಳ ವಿರುದ್ಧವೂ ಸಿಬಿಐ ಅವ್ಯವಹಾರದ ಆರೋಪ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT