ಪಾಟ್ನಾ: ಮಗಳ ಮಾನಕ್ಕಿಂತ ಮತದ ಮಾನ ತುಂಬಾ ದೊಡ್ಡದು ಎಂದು ಜೆಡಿಯು ಮುಖಂಡ ಶರದ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಟ್ನಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶರದ್ ಯಾದವ್ , ಮಗಳ ಮಾನ ಹೋದರೆ ಒಂದು ಊರಿನ ಮಾನ ಮತ್ತು ಸಮುದಾಯದ ಮಾನ ಮಾತ್ರ ಹೋಗುತ್ತದೆ. ಆದರೆ ಒಂದು ಬಾರಿ ಮತ ಮಾರಾಟವಾದರೆ ಇದು ದೇಶಕ್ಕೆ ತೊಂದರೆಯಾಗುತ್ತದೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ರಾಜ್ಯಸಭೆ ಸದಸ್ಯರಾಗಿರುವ ಶರದ್ ಯಾದವ್, ನಿನ್ನೆ ಬಿಹಾರದ ಮಾಜಿ ಮುಖ್ಯಮಂತ್ರಿ ಕಾರ್ಪೋರಿ ಠಾಕೂರ್ ಅವರ ಜನ್ಮದಿನಾಚರಣೆ ಹಿನ್ನೆಲೆ ನಡೆದ ಸಾರ್ವಜನಿಕ ಸಭೆಯಲ್ಲಿ ಈ ರೀತಿಯ ಮಾತುಗಳನ್ನು ಆಡಿದ್ದಾರೆ.