ದೇಶ

ಸರ್ಕಾರಿ ಬೆಂಬಲಿತ ಧರ್ಮಾಧಾರಿತ ಭಯೋತ್ಪಾದನೆಗೆ ಭಾರತ-ಯುಎಇ ಖಂಡನೆ

Srinivas Rao BV
ನವದೆಹಲಿ: ಅನ್ಯ ರಾಷ್ಟ್ರಗಳ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಸಕ್ರಿಯವಾಗಿಡಲು ಧರ್ಮಾಧಾರಿತ ಭಯೋತ್ಪಾದನೆಗೆ ಸರ್ಕಾರದಿಂದಲೇ ಸಿಗುತ್ತಿರುವ ಬೆಂಬಲವನ್ನು ಭಾರತ-ಯುಎಇ ಖಂಡಿಸಿವೆ. ಈ ಮೂಲಕ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ಉಭಯ ರಾಷ್ಟ್ರಗಳು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿವೆ. 
ಭಯೋತ್ಪಾದನೆ ವಿರುದ್ಧ ಶೂನ್ಯ ಸಹನೆ ತೋರುವುದಾಗಿ ಉಭಯ ರಾಷ್ಟ್ರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಭಯೋತ್ಪಾದನೆ ವಿರುದ್ಧ, ಧರ್ಮಾಧಾರಿತ ಭಯೋತ್ಪಾದನೆಗೆ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವುದಾಗಿ ಹೇಳಿವೆ. ಅಷ್ಟೇ ಅಲ್ಲದೇ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ವಿರುದ್ಧವೂ ಹೋರಾಡುವುದಾಗಿ ಭರವಸೆ ನೀಡಿರುವ ಯುಎಇ, ಭಯೋತ್ಪಾದನೆಯನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಜಂಟಿ ಹೇಳಿಕೆಯಲ್ಲಿ ಉಭಯ ರಾಷ್ಟ್ರಗಳೂ ಹೇಳಿವೆ. 
68 ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಬುಧಾಬಿಯ ರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದ  ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆ ನಿಗ್ರಹದ ಬಗ್ಗೆಯೂ ಚರ್ಚಿಸಿದ್ದರು. 
SCROLL FOR NEXT