ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಗುರೇಜ್ ಸೆಕ್ಟರ್ ಸಮೀಪ ಸಂಭವಿಸಿದ ಹಿಮಪಾತದಿಂದಾಗಿ ಭಾರತೀಯ ಸೇನೆಯ ಇಬ್ಬರು ಯೋಧರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಶ್ಮೀರದ ಗುರೇಜ್ ಸೆಕ್ಟರ್ ಬಳಿ ಮತ್ತೆ ಹಿಮಪಾತವಾಗಿದ್ದು, ಇಬ್ಬರು ಸೇನಾಧಿಕಾರಿಗಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಸೇನಾಧಿಕಾರಿಗಳಿಗಾಗಿ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಸೇನೆಯ ನುರಿತ ತಜ್ಞರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ನಿನ್ನೆಯಷ್ಟೇ ಇದೇ ಕಾಶ್ಮೀರದ ಸೋನಾಮಾರ್ಗ್ ಸಮೀಪದ ಸೇನಾ ಕ್ಯಾಂಪ್ ಬಳಿ ಸಂಭವಿಸಿದ ಹಿಮಪಾತದಿಂದಾಗಿ ಓರ್ವ ಸೇನಾಧಿಕಾರಿ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದರು. ಅಂತೆಯೇ ಹಿಮದಡಿಯಲ್ಲಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಇತರೆ ನಾಲ್ಕು ಮಂದಿ ಯೋಧರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿತ್ತು. ಇದಕ ಬೆನ್ನಲ್ಲೇ ಮತ್ತೆ ಹಿಮಪಾತವಾಗಿದ್ದು, ಇಬ್ಬರು ಸೇನಾಧಿಕಾರಿಗಳು ನಾಪತ್ತೆಯಾಗಿದ್ದಾರೆ.