ನವದೆಹಲಿ: ಒಂದು ಸಾವಿರ ರುಪಾಯಿಯ ಹೊಸ ನೋಟನ್ನು ಶೀಘ್ರದಲ್ಲೇ ಚಲಾವಣೆಗೆ ತರಲು ಆರ್ ಬಿ ಐ ನಿರ್ಧರಿಸಿದೆ.
ಹೊಸ ವಿನ್ಯಾಸದ 1,000 ರು ಮುಖಬೆಲೆಯ ನೋಟುಗಳ ಮುದ್ರಣದ ಕೆಲಸವನ್ನು ಆರ್‌ಬಿಐ ತ್ವರಿತಗೊಳಿಸಿದೆ. ಹಳೆಯ 1,000 ರು. ಮುಖಬೆಲೆಯ ನೋಟುಗಳಿಗಿಂತ ಹೊಸ ನೋಟು ಗಾತ್ರದಲ್ಲಿ ಚಿಕ್ಕದಾಗಿರಲಿದ್ದು, ಸುರಕ್ಷತೆಗೆ ಸಂಬಂಧಿಸಿ ಹೆಚ್ಚು ಅಂಶಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಒಂದು ಸಾವಿರ ರುಪಾಯಿಯ ಹೊಸನೋಟು ಅಂಧರಿಗೆ ಗುರುತಿಸಲು ಸಾಧ್ಯವಾಗುವಂತೆ ಬ್ರೈಲ್‌ಸ್ನೇಹಿ ಆಗಿರಲಿವೆ. 2,000 ಮುಖಬೆಲೆಯ ನೋಟುಗಳಿಗೆ ಚಿಲ್ಲರೆ ದೊರೆಯುವುದು ಕಷ್ಟವಾಗುತ್ತಿದೆ. ಹಾಗಾಗಿ ರು.1,000 ದ ನೋಟುಗಳ ಮುದ್ರಣ ಕಾರ್ಯವನ್ನು ತ್ವರಿತಗೊಳಿಸಲಾಗಿದೆ ಎನ್ನಲಾಗಿದೆ.
ಎಟಿಎಂನಿಂದ ದಿನಕ್ಕೆ ಪಡೆಯಬಹುದಾದ ಗರಿಷ್ಠ ಮೊತ್ತವನ್ನು ಇತ್ತೀಚೆಗೆ ರು.4,500ರಿಂದ 10 ಸಾವಿರಕ್ಕೆ ಏರಿಸಲಾಗಿತ್ತು. ಫೆಬ್ರವರಿ ತಿಂಗಳಲ್ಲಿ ವಿತ್ ಡ್ರಾ ಮಿತಿಯನ್ನು ರದ್ಧುಗೊಳಿಸಲಾಗುವುದು ಎನ್ನಲಾಗುತ್ತಿದೆ.