ದೇಶ

ಹಿಂದೆ ಪಟ್ಟಿಯಿಲ್ಲದ ಮಹಿಳೆಯರ ಪಾದರಕ್ಷೆಗಳು ಚಪ್ಪಲಿಯಲ್ಲ, ಅದು ಸ್ಯಾಂಡಲ್ಸ್: ದೆಹಲಿ ಹೈಕೋರ್ಟ್

Shilpa D

ನವದೆಹಲಿ: ಮಹಿಳೆ ಧರಿಸುವ ಪಾದರಕ್ಷೆಗಳಿಗೆ ಹಿಂದೆ ಪಟ್ಟಿ ಇಲ್ಲದಿದ್ದರೇ ಅವುಗಳನ್ನು ಚಪ್ಪಲಿ ಎನ್ನುವುದಿಲ್ಲ, ಅದಕ್ಕೆ ಸ್ಯಾಂಡಲ್ ಎಂದು ಕರೆಯುತ್ತಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಸ್ಯಾಂಡಲ್ಸ್ ಗಳನ್ನು ರಪ್ತು ಮಾಡುವಾಗ ಶೇ.10 ರಷ್ಟು ರಪ್ತು ಸುಂಕ ತೆರಬೇಕು, ಆದರೆ ಚಪ್ಪಲಿಗೆ ಶೇ.5 ರಷ್ಟು ಮಾತ್ರ ರಪ್ತು ಸುಂಕ ತೆರಬೇಕು ಎಂಬ ನಿಯಮದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ರೀತಿ ಹೇಳಿದೆ.

ಪಾದರಕ್ಷೆ ರಪ್ತು ಮಾಡುವ ಉತ್ಪಾದಕನಿಗೆ ಶೇ. 10 ರಷ್ಟು ಸುಂಕ ಮರುಪಾವತಿಗೆ ನಿರಾಕರಿಸಿದ್ದ ಸರ್ಕಾರ ಆತ ರಪ್ತು ಮಾಡಿದ್ದ ಪಾದರಕ್ಷೆಗಳಿಗೆ ಹಿಂದೆ ಬಿಗಿದು ಕಟ್ಟುವ ಪಟ್ಟಿ ಇರಲಿಲ್ಲ, ಆತ ಚಪ್ಪಲಿಗಳನ್ನು ರಪ್ತು ಮಾಡಿದ್ದ ಎಂದು ಸರ್ಕಾರ ಹೇಳಿತ್ತು.

ಎಸ್. ರವೀಂದ್ರ ಭಟ್ ಮತ್ತು ನಜ್ಮಾ ವಾಜಿರಿ ಅವರನ್ನೊಳಗೊಂಡ ಪೀಠ, ಹಿಂದೆ ಪಟ್ಟಿಯಿಲ್ಲದ ಪಾದರಕ್ಷೆಗಳು ಮಹಿಳೆಯರ ಸ್ಯಾಂಡಲ್ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಕಂದಾಯ ಇಲಾಖೆಗೆ ತಿಳಿಸಿದೆ.

ಚೆನ್ನೈ ಮೂಲದ ಪಾದರಕ್ಷೆ ಉತ್ಪಾದಕರಾದ ವಿಶಾಲ್ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ 2003 ರ ಮೇ ತಿಂಗಳಲ್ಲಿ ಮಹಿಳೆಯರ ಚರ್ಮದ ಸ್ಯಾಂಡಲ್ ಎಂಬ ಹೆಸರಿನ ಸರಕನ್ನು ರಪ್ತು ಮಾಡಿತ್ತು. ಜೊತೆಗೆ ಶೇ. 10 ರಷ್ಟು ರಪ್ತು ಸುಂಕ ಮರುಪಾವತಿಗೆ ಕೋರಿಕೆ ಸಲ್ಲಿಸಿತ್ತು. ಆದರೆ ಹಿಂಬದಿಯಲ್ಲಿ ಬಿಗಿದಿ ಕಟ್ಟುವ ಪಟ್ಟಿ ಇಲ್ಲದ ಪಾದರಕ್ಷೆ ಸ್ಯಾಂಡಲ್ ಅಲ್ಲ ಎಂದು ಸೀಮಾ ಸುಂಕ ಇಲಾಖೆ ಹೇಳಿತ್ತು,ಈ ವಿಷಯವನ್ನು ಸಂಸ್ಥೆಯು ಚರ್ಮ ರಪ್ತು ಸಮಿತಿ ಗಮನಕ್ಕೆ ತಂದಿತ್ತು. ಸಮಿತಿ ಇದನ್ನು ಸ್ಯಾಂಡಲ್ ಎಂದು ತಿಳಿಸಿತ್ತು, ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸೀಮಾ ಸುಂಕ ಇಲಾಖೆ ಕೋರ್ಟ್ ಮೆಟ್ಟಿಲೇರಿತ್ತು.

SCROLL FOR NEXT