ಕಟಕ್: ಫೇಸ್ ಬುಕ್ ನಲ್ಲಿ ಪರಿಚಿತನಾದ ವ್ಯಕ್ತಿ ಜೈಪುರ ಮೂಲದ ಆಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಜೈಲು ಪಾಲಾಗಿರುವ ಘಟನೆ ಕಟಕ್ ನಲ್ಲಿ ನಡೆದಿದೆ.
ಮೂಲತಃ ರಾಜಸ್ತಾನದ ಜೈಪುರ ಮೂಲದ ಅಪ್ರಾಪ್ತೆ ಫೇಸ್ ಬುಕ್ ನಲ್ಲಿ ಪರಿಚಿತನಾದ ಅಪ್ರಾಪ್ತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಕಳೆದ ಆರು ತಿಂಗಳಿನಿಂದಲೂ ಈ ಇಬ್ಬರೂ ಪರಸ್ಪರ ಫೇಸ್ ಬುಕ್ ನಲ್ಲಿ ಚಾಟಿಂಗ್ ನಲ್ಲಿ ತೊಡಗಿದ್ದರು. ಇತ್ತೀಚೆಗೆ ದುಷ್ಕರ್ಮಿ ಅಪ್ರಾಪ್ತೆಯನ್ನು ನಗರಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದ. ಅದರಂತೆ ನಗರಕ್ಕೆ ಆಗಮಿಸಿದ್ದ ಆಪ್ರಾಪ್ತೆಯನ್ನು ಬರ ಮಾಡಿಕೊಂಡ ದುಷ್ಕರ್ಮಿ ಆಕೆಯನ್ನು ಬದಂಬಾಡಿ ಪ್ರದೇಶದ ಮನೆಗೆ ಕರೆದೊಯ್ದಿದ್ದಾನೆ. ಮನೆಯಲ್ಲಿ ನಿರಂತರ ಮೂರು ದಿನಕಾಲ ಆಪ್ರಾಪ್ತೆಯನ್ನು ಇಟ್ಟುಕೊಂಡಿದ್ದ ದುಷ್ಕರ್ಮಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಬಳಿಕ ಜನವರಿ 29ರಂದು ಆತ ನಾಪತ್ತೆಯಾಗಿದ್ದು, ಈ ಬಗ್ಗೆ ಆಪ್ರಾಪ್ತೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಸ್ತುತ ಎಫ್ ಐಎರ್ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಯ ವಿರುದ್ಧ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಿಸುವ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡು ದುಷ್ಕರ್ಮಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.