ನವದೆಹಲಿ: ಕೇಂದ್ರ ಮಾಜಿ ಸಚಿವ, ಸಂಸದ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಇ.ಅಹಮದ್ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂತಾಪ ಸೂಚಿಸಿದ್ದಾರೆ.
ನಿರ್ಗತಿಕರು, ಬಡವರು, ಅವಕಾಶವಂಚಿತರ ಉದ್ಧಾರಕ್ಕೆ ಅಹ್ಮದ್ ಅವರು ದಣಿವರಿಯದೆ ಚಳವಳಿ ನಡೆಸುತ್ತಿದ್ದರು. ಅವರ ಸೇವೆಯನ್ನು ದೇಶ ದೀರ್ಘಕಾಲದವರೆಗೆ ಸ್ಮರಿಸುತ್ತದೆ. ಸುದೀರ್ಘ ವರ್ಷಗಳವರೆಗೆ ಸ್ನೇಹಿತ ಮತ್ತು ಸಹೋದ್ಯೋಗಿಯಾಗಿದ್ದ ಸಂಸದ ಇ ಅಹ್ಮದ್ ನಿಧನಕ್ಕೆ ಹೃದಯಪೂರ್ವಕ ಸಂತಾಪಗಳು ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.