ರಾಮಗಢ (ಜಾರ್ಖಾಂಡ್): ಗೋಮಾಂಸ ಸಾಗಣೆ ಮಾಡುತ್ತಿದ್ದಾನೆಂದು ಶಂಕಿಸಿ ಜಾರ್ಖಾಂಡ್ ರಾಜ್ಯದಲ್ಲಿ ನಡೆದ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ನಾಯಕ ಸೇರಿದಂತೆ ಇಬ್ಬರು ಆರೋಪಿಗಳನ್ನುಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ನಿತ್ಯಾನಂದ್ ಮಹೋತೊ ಬಂಧಿತ ಬಿಜೆಪಿ ನಾಯಕ ಎಂದು ಹೇಳಲಾಗುತ್ತಿದೆ. ಮತ್ತೊಬ್ಬ ಆರೋಗಿಯನ್ನು ಸಂತೋಷ್ ಸಿಂಗ್ ಎಂದು ಗುರ್ತಿಸಲಾಗಿಲಿದೆ.
ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯಾಗಿರುವ ಛೋಟು ರಾಣಾ ಎಂಬ ಆರೋಪಿ ರಾಮಗಢ್ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆಂದು ಪೊಲೀಸ್ ಅಧೀಕ್ಷಕ ಕಿಶೋರ್ ಕೌಶಲ್ ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಜಾರ್ಖಾಂಡ್ ನ ರಾಮಗಢ್ ಜಿಲ್ಲೆಯಲ್ಲಿ ಗೋಮಾಂಸ ಸಾಗಣೆ ಮಾಡುತ್ತಿದ್ದಾನೆಂದು ಶಂಕಿಸಿ ಅಲಿಮುದ್ದೀನ್ ಅಕಾ ಅಸ್ಗರ್ ಅಲಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
ಇದಕ್ಕೂ ಮುನ್ನ ಗೋಹತ್ಯೆ ಮಾಡಿದ್ದಾನೆಂಬ ಸಂಶಯದ ಮೇರೆಗೆ 200 ಮಂದಿ ಗೋರಕ್ಷಕರ ತಂಡ ಗಿರಿದಿ ಜಿಲ್ಲೆಯ ಬರಿಯಾಬಾದ್ ಗ್ರಾಮದ ಉಸ್ಮಾನ್ ಅನ್ಸಾರಿ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿತ್ತು. ಅಲ್ಲದೆ, ಅವರ ಮನೆಗೆ ಬೆಂಕಿ ಹಚ್ಚಿತ್ತು.