ದೇಶ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ದಾಖಲೆಗಳನ್ನು ಬಹಿರಂಗಪಡಿಸಿ:ಕೇಂದ್ರ ಮಾಹಿತಿ ಆಯೋಗ

Sumana Upadhyaya
ನವದೆಹಲಿ: ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿರುವ ಸಾರ್ವಜನಿಕ ಅಧಿಕಾರಿಗಳ ಬಗ್ಗೆ ಅವರ ಸ್ವತ್ತು, ಜಮೀನುಗಳ ದಾಖಲೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ವೆಬ್ ಸೈಟ್ ಗಳಲ್ಲಿ ಪ್ರಕಟಿಸಬೇಕೆಂದು ಕೇಂದ್ರ ಮಾಹಿತಿ ಆಯೋಗ ಸರ್ಕಾರಕ್ಕೆ ಆದೇಶ ನೀಡಿದೆ.
ಸರ್ಕಾರಿ ಇಲಾಖೆಗಳಲ್ಲಿ ಪಾರದರ್ಶಕತೆಯ ಕಾವಲುನಾಯಿ(watchdog) ರೀತಿ ಕೆಲಸ ಮಾಡುವ ಮಾಹಿತಿ ಆಯೋಗ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನಿರ್ದೇಶನ ನೀಡಿ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಸರಕಾರಿ ಅಧಿಕಾರಿಗಳ ಸಂಖ್ಯಾತ್ಮಕ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು, ಆದರೆ ಅವರ ಹೆಸರನ್ನು ಬಹಿರಂಗಪಡಿಸಬಾರದು ಎಂದು ಹೇಳಿದೆ.
ಯಾವುದೇ ಸನ್ನಿವೇಶದಲ್ಲಿಯೂ ಕೂಡ ಆರೋಪ, ಆಪಾದನೆಗಳನ್ನು ಎದುರಿಸುತ್ತಿರುವ ನೌಕರರ ಹೆಸರುಗಳನ್ನು ಬಹಿರಂಗಪಡಿಸಬಾರದು ಎಂದು ಮಾಹಿತಿ ಆಯುಕ್ತ ಯಶೋವರ್ದನ್ ಆಜಾದ್ ಹೇಳಿದ್ದಾರೆ.
ಹೀಗೆ ಅಂಕಿಅಂಶಗಳನ್ನು ಬಹಿರಂಗಪಡಿಸುವುದರಿಂದ ಸರ್ಕಾರಿ ಇಲಾಖೆಗಳಲ್ಲಿ ಉತ್ತಮ ಆಡಳಿತ ಸೃಷ್ಟಿಯಾಗುವ ಸಾಧ್ಯತೆಯಿದೆ ಅಲ್ಲದೆ ಸಾರ್ವಜನಿಕ ಹಿತಾಸಕ್ತಿಗೆ ನಿಸ್ಸಂಶಯವಾಗಿ ಸೇವೆ ಸಲ್ಲಿಸಬಹುದು ಎಂದು ಆಜಾದ್ ಹೇಳಿದರು.
ಅನೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಮಾಹಿತಿ ಬಹಿರಂಗಪಡಿಸುವಂತೆ ಅಶೋಕ್ ಕುಮಾರ್ ರೆಡ್ಡಿ ಎಂಬುವವರು ಆರ್ ಟಿಐ ನಲ್ಲಿ ಮಾಹಿತಿ ಕೇಳಿ ವಿಚಾರಣೆ ನಡೆಸುವಾಗ ಹೀಗೆ ಹೇಳಿದ್ದಾರೆ.
SCROLL FOR NEXT