ದೇಶ

ಸೀಮಿತ ದಾಳಿ ಭಾರತದ ಮೇಲೆ ವಿಶ್ವಕ್ಕಿದ್ದ ದೃಷ್ಟಿಕೋನವನ್ನೇ ಬದಲಿಸಿದೆ: ಅಮಿತ್ ಶಾ

Manjula VN
ಪಣಜಿ: ಪಾಕಿಸ್ತಾನ ಅಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿಯು ಭಾರತದ ಮೇಲೆ ವಿಶ್ವಕ್ಕಿದ್ದ ದೃಷ್ಟಿಕೋನವನ್ನೇ ಬದಲಾಯಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ. 
ಈ ಕುರಿತಂತೆ ಪಣಜಿಯಲ್ಲಿ ಮಾತನಾಡಿರುವ ಅವರು, ಉಗ್ರರ ನೆಲೆಗಳ ಮೇಲೆ ಸೇನೆ ನಡೆಸಿದ್ದ ಸೀಮಿತ ದಾಳಿ ಭಾರತ ಸ್ವರಕ್ಷಣೆಗೆ ಬದ್ಧವಾಗಿದೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿತ್ತು. ಪ್ರತೀನಿತ್ಯ ಉಗ್ರರು ನಮ್ಮ ಗಡಿ ನುಗ್ಗಿ ನಮ್ಮ ಸೇನೆಯ ಮೇಲೆ ದಾಳಿ ನಡೆಸುತ್ತಿತ್ತು. 
ಪ್ರಸ್ತುತ ಉಗ್ರರು ದಾಳಿ ನಡೆಸುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ. ಈಗಲೂ ಉಗ್ರರು ದಾಳಿ ನಡೆಸುತ್ತಿದ್ದಾರೆ. ಆದರೆ, ಉರಿ ಉಗ್ರ ದಾಳಿ ನಡೆದ ಬಳಿಕ ಪ್ರಧಾನಿ ಮೋದಿ ನೇತೃತ್ವದ  ಎನ್'ಡಿಎ ಸರ್ಕಾರ ಸೀಮಿತ ದಾಳಿ ನಡೆಸಿತ್ತು. ಈ ಮೂಲಕ ಸ್ವರಕ್ಷಣೆಗೆ ಭಾರತ ಸಿದ್ಧವಾಗಿದೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ರವಾಸಿದ್ದೆವು. ಅಮೆರಿಕ ರಾಷ್ಟ್ರ ಹೊರತುಪಡಿಸಿ ವಿಶ್ವದ ಯಾವುದೇ ರಾಷ್ಟ್ರಗಳು ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದೆವು ಎಂದು ತಿಳಿಸಿದ್ದಾರೆ. 
SCROLL FOR NEXT