ದೇಶ

ಜಿಎಸ್ ಟಿ: ವಾಸಿಸಲು ಸಿದ್ಧವಾಗಿರುವ ಫ್ಲಾಟ್ ಗಳ ಬೆಲೆ ಏರಿಕೆ, ಹೊಸ ಫ್ಲಾಟ್ ಗಳ ಬೆಲೆ ಇಳಿಕೆ!

Srinivas Rao BV
ಮುಂಬೈ: ಜಿಎಸ್ ಟಿ ಜಾರಿಗೆ ಬಂದಿರುವ ಪರಿಣಾಮ ಹಲವು ಕ್ಷೇತ್ರಗಳಲ್ಲಿನ ವಸ್ತುಗಳ ಬೆಲೆ ಏರಿಳಿಕೆಯಾಗಿದ್ದು, ವಾಸಿಸಲು ಸಿದ್ಧವಾಗಿರುವ ಫ್ಲಾಟ್ ಗಳನ್ನು ಖರೀದಿಸುವವರು ಹೆಚ್ಚಿನ ಬೆಲೆ ನೀಡಿ ಪಡೆಯಬೇಕಾಗಿದೆ. 
ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿದ್ದು, ಡೆವಲಪರ್ ಗಳ ಮೇಲೆ ಹೆಚ್ಚಿನ ತೆರಿಗೆ ಹೊರೆ ಬೀಳಲಿದ್ದು, ಅದು ಅಂತಿಮವಾಗಿ ಖರೀದಿಸುವವರ ಮೇಲೆ ಪರಿಣಾಮ ಉಂಟುಮಾಡಲಿದೆ. ಆದರೆ ಹೊಸದಾಗಿ ಪ್ರಾರಂಭವಾಗುವ ಫ್ಲಾಟ್ ನಿರ್ಮಾಣ ಯೋಜನೆಗಳಲ್ಲಿ ಡೆವಲಪರ್ ಗಳಿಗೆ ಜಿಎಸ್ ಟಿಯಿಂದ ಅನುಕೂಲವಾಗಲಿದ್ದು, ಹೊಸ ಫ್ಲಾಟ್ ಗಳ ಬೆಲೆ ಇಳಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಗೆ ವಿಧಿಸಲಾಗಿರುವ ತೆರಿಗೆ ಶೇ.6.5 ರಿಂದ ಶೇ.12 ಗೆ ಏರಿಕೆಯಾಗಿದೆ. ವಾಸ್ತವದಲ್ಲಿ ಜಿಎಸ್ ಟಿ ದರ ಶೇ.18 ರಷ್ಟಿದೆ. ಆದರೆ ಭೂಮಿಯ ಬೆಲೆಯಿಂದ ಮೂರನೇ ಒಂದರಷ್ಟು ತೆರಿಗೆಯನ್ನು ನೀಡಬೇಕಿದ್ದು, ಒಟ್ಟಾರೆ ಹೆಚ್ಚಿನ ತೆರಿಗೆ ಹೊರೆ ಡೆವಲಪರ್ ಮೇಲೆ ಬೀಳಲಿದೆ. ಹೊಸ ತೆರಿಗೆ ಪದ್ಧತಿ ಜಿಎಸ್ ಟಿ ಫುಲ್ ಇನ್ ಪುಟ್ ಸೆಟ್ ಆಫ್ ಕ್ರೆಡಿಟ್ ನ್ನು ನೀಡುತ್ತದೆಯಾದರೂ ಅದು ಈಗಾಗಲೇ ವಾಸಿಸಲು ಸಿದ್ಧವಾಗಿರುವ ಫ್ಲಾಟ್ ಗಳಿಗೆ ಅನ್ವಯಿಸುವುದಿಲ್ಲ. ಇದರ ಪರಿಣಾಮವಾಗಿ ಡೆವಲಪರ್ ಗಳು ತಮ್ಮ ಮೇಲೆ ಬೀಳುವ ಹೆಚ್ಚಿನ ತೆರಿಗೆಯನ್ನು ಖರೀದಿಸುವವರ ಮೇಲೆ ಹಾಕುತ್ತಿದ್ದು,  ವಾಸಿಸಲು ಸಿದ್ಧವಾಗಿರುವ ಫ್ಲಾಟ್ ಗಳನ್ನು ಖರೀದಿಸುವವರು ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕಾಗಿದೆ. 
SCROLL FOR NEXT