ದೇಶ

ಕೋರ್ಟ್ ಗಳ ವ್ಯವಹಾರಗಳನ್ನು ಕಾಗದರಹಿತಗೊಳಿಸಲು ಸುಪ್ರೀಂ ಕೋರ್ಟ್ ಕ್ರಮ

Sumana Upadhyaya
ನವದೆಹಲಿ: ಕಾಗದ ಬಳಸದೆ ಕಚೇರಿಯ ವ್ಯವಹಾರಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ಸುಪ್ರೀಂ ಕೋರ್ಟ್ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದು ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.
ಸುಪ್ರೀಂ ಕೋರ್ಟ್ ನೋಂದಾವಣೆ ಪ್ರಕಾರ, ಯೋಜನೆಯನ್ನು ನಿಧಾನವಾಗಿ ಜಾರಿಗೆ ತರಲಾಗುತ್ತಿದ್ದು, ಪ್ರದರ್ಶನ ಸಾಧನದ ಮೂಲಕ ನ್ಯಾಯಾಧೀಶರು ಡಿಜಿಟಲೀಕರಣಗೊಳಿಸಿ ಮೊದಲ ಹಂತದಲ್ಲಿ 5 ಕೋರ್ಟ್ ಗಳಲ್ಲಿ ಹೊಸ ವಿಷಯಗಳನ್ನು ಪಟ್ಟಿ ಮಾಡುತ್ತಾರೆ.
ದೇಶದಲ್ಲಿರುವ ಎಲ್ಲಾ ಹೈಕೋರ್ಟ್ ಗಳಿಗೆ ಲಾಗಿನ್ ಐಡಿ ನೀಡಲಾಗುತ್ತದೆ. ಇದರ ಮೂಲಕ ನಿಗದಿತ ಸ್ವರೂಪದಲ್ಲಿ ಡಿಜಿಟಲ್ ದಾಖಲೆಗಳನ್ನು ಅಪ್ಲೋಡ್ ಮಾಡಲಾಗುತ್ತದೆ.
'' ನ್ಯಾಯಾಲಯವನ್ನು ಕಾಗದರಹಿತವನ್ನಾಗಿ ಮಾಡಲು ಸುಪ್ರೀಂ ಕೋರ್ಟ್ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಕಾಗದರಹಿತ ಕೋರ್ಟ್ ಪರಿಕಲ್ಪನೆಯಲ್ಲಿ ಅನೇಕ ತಾಂತ್ರಿಕ ಮತ್ತು ಕಾರ್ಯನಿರ್ವಹಣೆಯ ವಿಷಯಗಳು ಒಳಗೊಂಡಿರುತ್ತದೆ. ಯೋಜನೆಯನ್ನು ನಿಧಾನವಾಗಿ ಜಾರಿಗೆ ತರುವ ಉದ್ದೇಶವಿದೆ. ಅಡ್ವೊಕೇಟ್ ಮತ್ತು ನ್ಯಾಯಾಧೀಶರಿಗೆ ಕೆಲಸ ಮಾಡಲು ಇದು ಹೊಸ ವಿಧಾನವಾಗಿದೆ ಎಂದು ಸುಪ್ರೀಂ ಕೋರ್ಟ್ ನ ನೋಂದಾವಣೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ನ ಸಂಯೋಜಿತ ಪ್ರಕರಣ ನಿರ್ವಹಣಾ ಮಾಹಿತಿ ವ್ಯವಸ್ಥೆ(ಐಸಿಎಂಐಎಸ್) ಆರಂಭಗೊಂಡ ನಂತರ ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಕೇಸು ದಾಖಲೆಗಳನ್ನು ಅಪ್ ಲೋಡ್ ಮಾಡಿದೆ.
ಎಲ್ಲಾ ಹೈಕೋರ್ಟ್ ಗಳೊಂದಿಗೆ ಸುಪ್ರೀಂ ಕೋರ್ಟ್ ನೋಂದಾವಣೆ ಸಂವಹನ ಮಾಡುತ್ತದೆ. ಹೈಕೋರ್ಟ್ ನ ನೋಡಲ್ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಲಾಗಿದೆ. 
SCROLL FOR NEXT