ನರೇಂದ್ರ ಮೋದಿ 
ದೇಶ

ಉಗ್ರ ನಿಗ್ರಹ, ಆರ್ಥಿಕ ಸಂಬಂಧ ವೃದ್ದಿ: ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸದ ಅಜೆಂಡಾ

ಭಯೋತ್ಪದಾನೆಯನ್ನು ಮಟ್ಟಹಾಕುವ ಸಂಬಂಧ ಪರಸ್ಪರ ಸಹಕಾರ ಹಾಗೂ ಆರ್ಥಿಕ ಸಂಬಂಧ ವೃದ್ದಿಗೆ ಸಂಬಂಧಿಸಿದಂತೆ ಇಸ್ರೇಲ್‌ ಪ್ರಧಾನಿ....

ನವದೆಹಲಿ: ಭಯೋತ್ಪದಾನೆಯನ್ನು ಮಟ್ಟಹಾಕುವ ಸಂಬಂಧ ಪರಸ್ಪರ ಸಹಕಾರ ಹಾಗೂ ಆರ್ಥಿಕ ಸಂಬಂಧ ವೃದ್ದಿಗೆ ಸಂಬಂಧಿಸಿದಂತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗಿನ ಚರ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಇಸ್ರೇಲ್ ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಮೋದಿ ಪ್ರವಾಸಕ್ಕು ಮುನ್ನ ಟ್ವೀಟ್ ಮಾಡಿದ್ದು, ಉಭಯ ದೇಶಗಳ ನಡುವಿನ ಪರಸ್ಪರ ಲಾಭದಾಯಕ ಎನಿಸುವ ವ್ಯಾಪಕ ವಿಷಯಗಳ ಕುರಿತು ಆಳವಾದ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ. 
ಭದ್ರತೆ ಮತ್ತು ಸಾರ್ವಭೌಮತೆಯ ವಿಷಯದಲ್ಲಿ ಎಂಟೆದೆಯ ರಾಷ್ಟ್ರವೆಂದೇ ಖ್ಯಾತಿ ಪಡೆದಿರುವ ಇಸ್ರೇಲ್‌ ಜತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ನಾಳೆಯಿಂದ ಮೂರು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಭಯೋತ್ಪಾದನೆಯಂತಹ ಸಮಾನ ಹಾಗೂ ಪ್ರಮುಖ ಭದ್ರತಾ ಸವಾಲುಗಳನ್ನು ನಿಭಾಯಿಸುವ ಬಗ್ಗೆಯೂ ನಾವು ಚರ್ಚಿಸಲಿದ್ದೇವೆ ದು ಮೋದಿ ತಿಳಿಸಿದ್ದಾರೆ. 
ಈ ಅಭೂತಪೂರ್ವ ಭೇಟಿಯನ್ನು ಕಾತರದಿಂದ ಎದುರು ನೋಡುತ್ತಿರುವ ನಾನು, ಈ ಭೇಟಿ ಉಭಯ ದೇಶಗಳನ್ನು ಹಾಗೂ ಅವುಗಳ ಜನರನ್ನು ಇನ್ನಷ್ಟು ಸನಿಹಕ್ಕೆ ತರುವಂತಾಗಲೆಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!