ಹೆರೋನ್ ಟಿಪಿ ಡ್ರೋನ್- ನೆತನ್ಯಾಹು-ಪ್ರಧಾನಿ ಮೋದಿ 
ದೇಶ

ಮೋದಿ ಇಸ್ರೇಲ್ ಭೇಟಿ: ಶೀಘ್ರದಲ್ಲೇ ಪ್ರಬಲ ಶಕ್ತಿಶಾಲಿ ಹೆರೋನ್ ಟಿಪಿ ಡ್ರೋನ್ ಭಾರತಕ್ಕೆ!

ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಯನ್ನು ಮತ್ತಷ್ಟು ಪ್ರಬಲಗೊಳಿಸಲು ಮುಂದಾಗಿದ್ದು ಅಮೆರಿಕದಿಂದ 22 ಕಡಲಿನ ಕಣ್ಗಾವಲಿನ ಡ್ರೋನ್...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಯನ್ನು ಮತ್ತಷ್ಟು ಪ್ರಬಲಗೊಳಿಸಲು ಮುಂದಾಗಿದ್ದಾರೆ. ಅಮೆರಿಕದಿಂದ 22 ಕಡಲಿನ ಕಣ್ಗಾವಲಿನ ಡ್ರೋನ್ ಖರೀದಿಸಿದ್ದ ಮೋದಿ ಅವರು ಇದೀಗ ಇಸ್ರೇಲ್ ನ ಪ್ರಬಲ ಹೆರೋನ್ ಟಿಪಿ ಡ್ರೋನ್ ಗಳನ್ನು ಖರೀದಿಸಲು ಮುಂದಾಗಿದ್ದಾರೆ. 
ನೆರೆ ರಾಷ್ಟ್ರಗಳಿಂದ ಯುದ್ಧದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ಸೇನೆಯನ್ನು ಸಧೃಡಗೊಳಿಸಲು ಮುಂದಾಗಿದ್ದಾರೆ. ಅಂತೆ ಇಸ್ರೇಲ್ ಪ್ರವಾಸ ಕೈಗೊಂಡಿರುವ ಮೋದಿ ಅವರು ಕಣ್ಗಾವಲಿಗಷ್ಟೇ ಅಲ್ಲ, ಯುದ್ಧಕ್ಕೂ ಸಿದ್ಧವಿರುವ 10 ಹೆರೋನ್ ಟಿಪಿ ಡ್ರೋನ್ ಗಳನ್ನು ಖರೀದಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಹಿಂದಿನ ಯುಪಿಎ ಸರ್ಕಾರ ಇಸ್ರೇಲ್ ನ ಪ್ರಬಲ ಹೆರೋನ್ ಟಿಪಿ ಡ್ರೋನ್ ಖರೀದಿಸಲು ಮೀನ-ಮೇಷ ಎಣಿಸುತ್ತಿತ್ತು. 
ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಪ್ರವಾಸ ಕೈಗೊಂಡಿರುವುದು ಇದೇ ಮೊದಲು. ಭಾರತದ ಈ ಹಿಂದಿನ ಯಾವ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಮಾಡದ ಧೈರ್ಯವನ್ನು ಮೋದಿ ತೋರಿಸಿದ್ದಾರೆ. ಇದರಿಂದ ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. 
ಶಸ್ತ್ರಾಸ್ತ್ರ ಆಮದು ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಅಮೆರಿಕ ಮತ್ತು ರಷ್ಯಾವನ್ನು ಹಿಂದಿಕ್ಕಿ ಇಸ್ರೇಲ್ ಮೊದಲ ಸ್ಥಾನದಲ್ಲಿದೆ. ಇಸ್ರೇಲ್ ಪ್ರತೀ ವರ್ಷ 6 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. 
ಹೆರೋನ್ ಟಿಪಿ ಡ್ರೋನ್ ಸಾಮರ್ಥ್ಯ:
ಹೆರೋನ್ ಟಿಪಿ ಡ್ರೋನ್ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಸುದೀರ್ಘ ಹಾರಾಟ ಸಾಮರ್ಥ್ಯ. ಕಣ್ಗಾವಲಿಗಷ್ಟೇ ಅಲ್ಲ, ಯುದ್ಧಕ್ಕೂ ಸಿದ್ಧ. 
* ಯಾವುದೇ ವಾತವರಣದಲ್ಲೂ ಹಾರಾಟ ನಡೆಸುವ ಸಾಮರ್ಥ್ಯ.
* 30 ಗಂಟೆಗಳ ಸುದೀರ್ಘ ಹಾರಾಟ ಸಾಮರ್ಥ್ಯ. 
* 45 ಸಾವಿರ ಅಡಿ ಎತ್ತರದಲ್ಲಿ ನಿರಂತರವಾಗಿ ಹಾರಾಟ
* ಗರಿಷ್ಠ ತೂಕ ಹೊತ್ತೊಯ್ಯುವ ಸಾಮರ್ಥ್ಯ
* 1 ಸಾವಿರ ಕೆಜಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video