ದೇಶ

ಗೋರಕ್ಷಣೆ ಹೆಸರಲ್ಲಿ ಹತ್ಯೆ ಹಿಂದುತ್ವಕ್ಕೆ ವಿರೋಧವಾದದ್ದು: ಶಿವಸೇನಾ

Shilpa D
ಮುಂಬಯಿ: ಗೋರಕ್ಷಣೆ ಹೆಸರಲ್ಲಿ ನಡೆಯುವ ಹತ್ಯೆ ಹಿಂದುತ್ವಕ್ಕೆ ವಿರೋಧವಾದದ್ದು, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಗೋ ನೀತಿ ರೂಪಿಸಬೇಕೆಂದು ಶಿವಸೇನೆ ಆಗ್ರಹಿಸಿದೆ.
ಬಿಜೆಪಿ ಆಡಳಿತವಿರುವ ಜಾರ್ಖಂಡ್, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂಥಹ ಘಟನೆಗಳು ನಡೆದಿದ್ದು, ಅದನ್ನು ವಿರೋಧಿಸಿ ಪ್ರತಿಭಟನೆಗಳು ಜರುಗಿವೆ, ಗೋಮಾಂಸದ ವಿಷಯವು ಆಹಾರ ಪದ್ಧತಿ, ವ್ಯಾಪಾರ- ವ್ಯವಹಾರ, ಉದ್ಯೋಗಕ್ಕೆ ಸಂಬಂಧಿಸಿದ್ದಾಗಿದೆ, ಹೀಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ರಾಷ್ಟ್ರೀಯ ನೀತಿಯ ಅವಶ್ಯಕತೆಯಿದೆ ಎಂದು ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.
ಹಸುಗಳನ್ನು ರಕ್ಷಿಸುವವರು ನಿನ್ನೆಯವರಗೂ ಹಿಂದೂಗಳಾಗಿದ್ದರು. ಇಂದು ಅವರೆಲ್ಲಾ ಕೊಲೆಗಾರರಾಗುತ್ತಿದ್ದಾರೆ ಎಂದು ಹೇಳಿದೆ.
ಗೋರಕ್ಷಣೆ ಹೆಸರಲ್ಲಿ ನಡೆಯುವ ಕೊಲೆಗಳನ್ನು ಸಹಿಸಲಾಗದು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ  ಕಾನೂನನನ್ನು ಕೈಗೆ ತೆಗೆದುಕೊಳ್ಳುವರವರಿಗೆ ಎಚ್ಚರಿಕೆ ನೀಡಿದ್ದರು. ಪ್ರಕರಣ ಸಂಬಂಧ ಪ್ರಧಾನಿಯವರು ತೆಗೆದುಕೊಂಡ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಗೋಸಂಬಂಧಿತ ರಾಷ್ಟ್ರೀಯ ನೀತಿಯೊಂದನ್ನು ಪ್ರಧಾನಿ ರೂಪಿಸಲೇಬೇಕೆಂದು ಆಗ್ರಹಿಸಿದೆ.  
SCROLL FOR NEXT