ಇಟಾನಗರ: ನಿನ್ನೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನ ಅವಶೇಷಗಳನ್ನು ಬುಧವಾರ ಹಿಮಾಚಲ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಅದರಲ್ಲಿದ್ದ ಮೂವರು ಸಿಬ್ಬಂದಿ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಆಳವಾದ ಕಣಿವೆಯೊಂದರಲ್ಲಿ ಹೆಲಿಕಾಪ್ಟರ್ ನ ಅವಶೇಷ ಪತ್ತೆಯಾಗಿದ್ದು, ಸಿಬ್ಬಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಟಾನಗರ ಜಿಲ್ಲೆಯ ಚೋಪೋ ಯೋಹ ಕಣಿವೆಯಲ್ಲಿ ಹೆಲಿಕಾಪ್ಟರ್ ನ ಅವಶೇಷಗಳು ಪತ್ತೆಯಾಗಿವೆ. ಆದರೆ ಸಿಬ್ಬಂದಿ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕ(ಕಾನೂನು ಸುವ್ಯವಸ್ಥೆ) ನಬಿನ್ ಪಯೆಂಗ್ ಅವರು ತಿಳಿಸಿದ್ದಾರೆ.
ವಾಯುಪಡೆ ವಿಮಾನ ನಿನ್ನೆ ಪಪುಮ್ ಪರೆ ಜಿಲ್ಲೆಯ ಸಗಲೀಯಿಂದ ನಾಪತ್ತೆಯಾಗಿತ್ತು.