ಲಖನೌ: ಉತ್ತರಪ್ರದೇಶ ಸರ್ಕಾರದಿಂದ ಪರಿಹಾರ ಪಡೆಯುವ ಸಲುವಾಗಿ ವಯಸ್ಸಾದ ಹಿರಿ ಜೀವಗಳನ್ನು ಹುಲಿಗಳಿಗೆ ಆಹಾರವಾಗಿಸುತ್ತಿರುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಫಿಲಿಬಿಟ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತ್ತಿರುವ ಗ್ರಾಮಗಳ ಜನ ತಮ್ಮ ಮನೆಯ ವಯಸ್ಸಾದವರನ್ನು ಹುಲಿಗಳಿಗೆ ಆಹಾರವಾಗಿ ಬಲಿ ಕೊಟ್ಟು ಬಳಿಕ ಪರಿಹಾರದ ಹಣ ಪಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.
ಸರಿ ಸುಮಾರು 7 ಪ್ರಕರಣಗಳು ಕಳೆದ ಫೆಬ್ರವರಿಯಿಂದ ಬೆಳಕಿಗೆ ಬಂದಿದೆ. ಹುಲಿ ದಾಳಿಗೊಳಗಾದವರ ಕುಟುಂಬದವರಿಗೆ ಸರ್ಕಾರ ಲಕ್ಷ ಲಕ್ಷ ಪರಿಹಾರ ನೀಡುತ್ತಿದೆ. ಹೀಗಾಗಿ ಹಣದ ಆಸೆಗೆ ಕೆಲವರು ಇಂತರ ಕಿಡಿಗೇಡಿ ಕೃತ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಜುಲೈ 1ರಂದು ಹುಲಿ ದಾಳಿಗೆ 55 ವರ್ಷದ ಮಹಿಳೆ ಬಲಿಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಅರಣ್ಯ ಸಂರಕ್ಷಣಾಧಿಕಾರಿ ವಿಕೆ ಸಿಂಗ್ ಅವರಿಗೆ ಆಘಾತಕಾರಿ ಅಂಶಗಳು ತಿಳಿದುಬಂದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಗ್ರಾಮಸ್ಥರು ಹೊಲದಲ್ಲಿ ಹುಲಿ ದಾಳಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಆದರೆ ಮೃತ ಮಹಿಳೆಯ ಬಟ್ಟೆ ಅರಣ್ಯದ ಒಂದೂವರೆ ಕಿ.ಮೀ ಒಳಗೆ ಪತ್ತೆಯಾಗಿವೆ. ಸಂಬಂಧಿಕರೇ ಅರಣ್ಯಕ್ಕೆ ಕರೆದೊಯ್ದು ಹುಲಿ ಬಾಯಿಗೆ ಕೊಟ್ಟು ಬಳಿಕ ಕಳೆಬರವನ್ನು ಹೊಲಕ್ಕೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics