ಕೇಂದ್ರ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ
ನವದೆಹಲಿ: ವಾಜಪೇಯಿ ಅವರ ನೇತೃತ್ವದ ಎನ್ ಡಿಎ 2004ರ ಲೋಕಸಭಾ ಚುನಾವಣೆಯಲ್ಲಿ ಸೋಲಲು ನಾನೇ ಕಾರಣ ಎಂದು ಕೇಂದ್ರ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಸಿನ್ಹಾ ಮತ್ತು ವಿನಯ್ ಕೆ.ಶ್ರೀವಾಸ್ತವ ಅವರು ಸಂಪಾದಿಸಿರುವ ಪುಸ್ತಕವೊಂದರಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಸುಧಾರಣೆಗಾಗಿ ತಾವು ತೆಗೆದುಕೊಂಡ ಸೀಮೆಎಣ್ಣೆ ಬೆಲೆ ಏರಿಕೆ ಮತ್ತು ಪ್ರಾವಿಡಂಟ್ ಫಂಡ್ ಮೇಲಿನ ಬಡ್ಡಿ ಕಡಿತದಂಥ ಕ್ರಮಗಳು ಮತದಾರರನ್ನು ಕಳೆದುಕೊಳ್ಳಲು ಕಾರಣವಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಯಾವಾಗಲೂ ಭಾರತದ ಆರ್ಥಿಕೆಯನ್ನು ನಿಯಂತ್ರಿಸುತ್ತದೆ. ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಅಪಾಯಗಳನ್ನು ಎದುರಿಸುತ್ತಿರುತ್ತಾರೆ. ವಿಶೇಷವಾಗಿ ಚುನಾವಣೆ ಸಂದರ್ಭಗಳಲ್ಲಿ. ಆರ್ಥಿಕ ಸುಧಾರಣೆಗಳಿಗಾಗಿ ಅವರು ತಮ್ಮ ಸರ್ಕಾರ ಹಾಗೂ ರಾಜಕೀಯ ಭವಿಷ್ಯಗಳ ಅಸ್ತಿತ್ವತೆಯನ್ನು ಮುಂದಿಡುವುದಿಲ್ಲ.
ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಅಪಾಯವನ್ನು ಎದುರಿಸುತ್ತವೆ, ವಿಶೇಷವಾಗಿ ಚುನಾವಣೆಗೆ ಸಂಬಂಧಿಸಿದಂತೆ. ಆರ್ಥಿಕ ಸುಧಾರಣೆಗಳಿಗಾಗಿ ತಮ್ಮ ಸರ್ಕಾರ ಅಥವಾ ಅವರ ರಾಜಕೀಯ ಭವಿಷ್ಯದ ಅಸ್ತಿತ್ವವನ್ನು ಮುಂದಿಡಲು ಅವರು ಇಷ್ಟಪಡುವುದಿಲ್ಲ. ಆರ್ಥಿಕ ಬೆಳವಣಿಗೆ ಭಾರತದಲ್ಲಿ ಎಂದಿಗೂ ರಾಜಕೀಯ ವಿಷಯವಾಗಿಲ್ಲ. 2004ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಪಕ್ಷ ಸೋಲು ಕಾಣಲು ನಾನು ಜವಾಬ್ದಾರಿನಾಗಿದ್ದೇನೆಂದು ಎನಿಸುತ್ತದೆ. ಅಂದಿನ ಚುನಾವಣೆಯಲ್ಲಿ ಸೋಲಿನ ಪಾಠವನ್ನು ನಾನು ಎಂದಿಗೂ ಮರೆಯುವಿದಿಲ್ಲ ಎಂದು ಸಿನ್ಹಾ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics