ಜಮ್ಮು-ಕಾಶ್ಮೀರ: ಶಸ್ತ್ರಾಸ್ತ್ರಗಳೊಂದಿಗೆ ಸೇನಾ ಕ್ಯಾಂಪ್'ನಿಂದ ಯೋಧ ನಾಪತ್ತೆ
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಂಟ್ ಮುಲ್ಲಾದ ಸೇನಾ ಕ್ಯಾಂಪ್ ನಲ್ಲಿದ್ದ ಭಾರತೀಯ ಯೋಧನೊಬ್ಬ ಶಾಸ್ತ್ರಾಸ್ತ್ರಗಳೊಂದಿಗೆ ನಾಪತ್ತೆಯಾಗಿರುವುದಾಗಿ...
ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಂಟ್ ಮುಲ್ಲಾದ ಸೇನಾ ಕ್ಯಾಂಪ್ ನಲ್ಲಿದ್ದ ಭಾರತೀಯ ಯೋಧನೊಬ್ಬ ಶಾಸ್ತ್ರಾಸ್ತ್ರಗಳೊಂದಿಗೆ ನಾಪತ್ತೆಯಾಗಿರುವುದಾಗಿ ಗುರುವಾರ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ನಿವಾಸಿಯಾಗಿರುವ ಝಹಾರ್ನಾಅಹ್ಮದ್ ನಾಪತ್ತೆಯಾಗಿರುವ ಯೋಧರಾಗಿದ್ದು, 173 ಪ್ರಾದೇಶಿಕ ಸೈನ್ಯದ ಯೋಧರಾಗಿದ್ದಾರೆ.
ಎಕೆ-47, 3 ಮ್ಯಾಗಜಿನ್ ಗುಂಡುಗಳೊಂದಿಗೆ ಯೋಧ ನಾಪತ್ತೆಯಾಗಿದ್ದು, ನಾಪತ್ತೆ ಹಿಂದೆ ಹಲವು ಶಂಕೆಗಳು ಮೂಡತೊಡಗಿವೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.