ಎಮ್ಮೆ ಮರಿ 
ದೇಶ

ದೆಹಲಿಯಲ್ಲಿ ಅಕ್ರಮ ಎಮ್ಮೆ ಸಾಗಾಣೆ: ಉದ್ರಿಕ್ತ ಗುಂಪಿನಿಂದ ಆರು ಮಂದಿಗೆ ಥಳಿತ

ದೆಹಲಿಯ ಬಾಬಾ ಹರಿದಾಸ್ ನಗರದಲ್ಲಿ ಅಕ್ರಮವಾಗಿ ಎಮ್ಮೆ ಮರಿಗಳನ್ನು ಸಾಗಣೆ ಮಾಡುತ್ತಿದ್ದ ಆರು ಮಂದಿಗೆ ಉದ್ರಿಕ್ತ ಗುಂಪೊಂದು ತೀವ್ರವಾಗಿ ಥಳಿಸಿದ್ದಾರೆ...

ನವದೆಹಲಿ: ದೆಹಲಿಯ ಬಾಬಾ ಹರಿದಾಸ್ ನಗರದಲ್ಲಿ ಅಕ್ರಮವಾಗಿ ಎಮ್ಮೆ ಮರಿಗಳನ್ನು ಸಾಗಣೆ ಮಾಡುತ್ತಿದ್ದ ಆರು ಮಂದಿಗೆ ಉದ್ರಿಕ್ತ ಗುಂಪೊಂದು ತೀವ್ರವಾಗಿ ಥಳಿಸಿದ್ದಾರೆ. 
ಆರು ವಾಹನಗಳಲ್ಲಿ ಎಮ್ಮೆ ಮರಿಗಳನ್ನು ಸಾಗಿಸಲಾಗುತ್ತಿತ್ತು ಈ ಮಾಹಿತಿ ಪಡೆದ ಗುಂಪೊಂದು ವಾಹನಗಳನ್ನು ತಡೆದ ಅದರಲ್ಲಿದ್ದ ಚಾಲಕರನ್ನು ಮನಬಂದಂತೆ ಥಳಿಸಿ ಎಮ್ಮೆ ಮರಿಗಳನ್ನು ಬಿಟ್ಟು ಓಡಿಸಿದ್ದಾರೆ. 
ಈ ದಾಳಿಯಲ್ಲಿ ಚಾಲಕ ಅಲಿ ಜಾನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಆತನ ಮಗ ದಾಳಿಕೋರರ ಮೇಲೆ ದೂರು ದಾಖಲಿಸಿದ್ದಾನೆ. 
ಇನ್ನು ಜೂನ್ 30ರಂದು ಜಾರ್ಖಂಡ್ ರಾಮಗಢ ನಲ್ಲಿ ಗೋಮಾಂಸವನ್ನು ಹೊತ್ತೊಯ್ಯುತ್ತಿದ್ದಾನೆ ಎಂದು ಆರೋಪಿಸಿ ಗುಂಪೊಂದು ವ್ಯಕ್ತಿ ಮೇಲೆ ಗಂಭೀರ ಹಲ್ಲೆ ಮಾಡಿತ್ತು. ಈ ದಾಳಿಯಲ್ಲಿ ಆತ ಮೃತಪಟ್ಟಿದ್ದ. 
ಇತ್ತೀಚೆಗಷ್ಟೆ ಪ್ರಧಾನಿ ಮೋದಿ ಅವರು ಗೋ ರಕ್ಷಣೆ ಹೆಸರಲ್ಲಿ ಗೋರಕ್ಷಕರು ಹಲ್ಲೆ ಮಾಡುವುದು ಸರಿಯಲ್ಲ ಎಂದು ಖಂಡಿಸಿದ್ದರು. ಇದಾದ ಬೆನ್ನಲೇ ಕೆಲ ಕಡೆ ಗೋ ಸಾಗಾಣೆಗಾರರ ಮೇಲೆ ದಾಳಿಗಳು ನಡೆಸುತ್ತಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT