ಚೀನಾ-ಭಾರತ ಗಡಿ ಪ್ರದೇಶ (ಸಾಂಕೇತಿಕ ಚಿತ್ರ)
ನವದೆಹಲಿ: ಭಾರತ-ಚೀನಾ ನಡುವೆ ಉಂಟಾಗಿರುವ ಡೋಕ್ಲಾಮ್ ಗಡಿ ವಿವಾದ ಬಗೆಹರಿಸಲು ಚೀನಾ ಮೂರು ಷರತ್ತು ವಿಧಿಸಿದ್ದು, ಡೋಕ್ಲಾಮ್ ಪ್ರದೇಶದಿಂದ ಭಾರತ ತನ್ನ ಸೇನಾ ಪಡೆಗಳನ್ನು ಬೇಷರತ್ತಾಗಿ ವಾಪಸ್ ಕರೆಸಿಕೊಳ್ಳುವುದು ಒಂದಾಗಿದೆ.
ಚೀನಾದ ರಾಜತಾಂತ್ರಿಕ ಅಧಿಕಾರಿ ಚೀನಾದ ಮೂರು ಷರತ್ತುಗಳನ್ನು ಮಾಧ್ಯಮಗಳೆದುರು ಹೇಳಿದ್ದು, ಗಡಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣವನ್ನು ಸರಿಪಡಿಸುವುದು ಭಾರತದ ಕೈಯಲ್ಲಿದೆ. ಚೆಂಡು ಭಾರತದ ಅಂಗಳದಲ್ಲಿದ್ದು, ಶಾಂತಿಯುತವಾಗಿ ಮಾತ್ರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಉಂಟಾಗಿರುವ ವಿವಾದವನ್ನು ಯಾವ ವಿಧಾನದಲ್ಲಿ ಬಗೆಹರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕಿರುವುದು ಭಾರತ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿ ಲಿ ಫಾನ್ ಹೇಳಿದ್ದಾರೆ.
ಗಡಿ ವಿವಾದ ಬಗೆಹರಿಸಿಕೊಳ್ಳಲು ಚೀನಾದ ರಾಯಭಾರಿ ಅಧಿಕಾರಿ ಮೂರು ಷರತ್ತುಗಳನ್ನು ಮುಂದಿಟ್ಟಿದ್ದು, ಅವು ಇಂತಿವೆ
- ಡೋಕ್ಲಾಮ್ ಪ್ರದೇಶದಿಂದ ಭಾರತ ತನ್ನ ಸೇನಾ ಪಡೆಗಳನ್ನು ಬೇಷರತ್ತಾಗಿ ವಾಪಸ್ ಕರೆಸಿಕೊಳ್ಳಬೇಕು.
- ಶಾಂತಿಯುತವಾಗಿ ವಿವಾದ ಬಗೆಹರಿಸಿಕೊಳ್ಳುವುದು
- ಗಡಿ ಪ್ರದೇಶದಲ್ಲಿ ಶಾಂತಿಯನ್ನು ಪುನರ್ಸ್ಥಾಪಿಸಬೇಕು.
ಇವಿಷ್ಟು ಚೀನಾ ಡೋಕ್ಲಾಮ್ ಗಡಿ ಪ್ರದೇಶದಲ್ಲಿ ಉಂಟಾಗಿರುವ ವಿವಾದವನ್ನು ಬಗೆಹರಿಸಿಕೊಳ್ಳಲು ವಿಧಿಸಿರುವ ಷರತ್ತುಗಳಾಗಿವೆ.