ನವದೆಹಲಿ: ಭಾರತದ ಇಬ್ಬರು ಸಂಶೋಧಕರಿಗೆ ವೀಸಾ ನಿರಾಕರಣೆ ಮಾಡಿರುವ ವರದಿಗಳನ್ನು ಚೀನಾ ರಾಯಭಾರಿ ಕಚೇರಿ ಅಲ್ಲಗಳೆದಿದೆ.
ಶಾಂಘೈ ನಲ್ಲಿರುವ ಫುಡಾನ್ ವಿಶ್ವವಿದ್ಯಾನಿಲಯಕ್ಕೆ ಭಾರತದಿಂದ 7 ಸದಸ್ಯರ ನಿಯೋಗ ಭೇಟಿ ನೀಡಲಿದ್ದು, ಈ ಪೈಕಿ ಇಬ್ಬರು ಸಂಶೋಧಕರಿಗೆ ವೀಸಾ ನಿರಾಕರಿಸಲಾಗಿದೆ ಎಂಬ ವರದಿ ಪ್ರಕಟವಾಗಿತ್ತು. ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಾರತೀಯ ರಾಯಭಾರಿಗಳಿಗೆ ವೀಸಾ ನಿರಾಕರಣೆ ಮಾಡಿಲ್ಲ ಎಂದು ಹೇಳಿದೆ.
ಇಂಡಿಯಾ ಫೌಂಡೇಶನ್ ನ ನಿರ್ದೇಶಕ ಅಲೋಕ್ ಬನ್ಸಾಲ್ ಅವರ ವೀಸಾ ತಡೆ ಹಿಡಿದು, ಇಬ್ಬರು ಸಂಶೋಧಕರ ವೀಸಾಗಳನ್ನು ನಿರಾಕರಿಸಿತ್ತು, ಈ ಬೆಳವಣಿಗೆ ಬೆನ್ನಲ್ಲೇ ಇಂಡಿಯಾ ಫೌಂಡೇಶನ್ ಚೀನಾ ಭೇಟಿಯನ್ನು ರದ್ದುಗೊಳಿಸಿತ್ತು. ಆದರೆ ಈ ಬಗ್ಗೆ ಚೀನಾ ಸ್ಪಷ್ಟನೆ ನೀಡಿದ್ದು, ಚೀನಾ ಯಾವುದೇ ವೀಸಾ ತಡೆಹಿಡಿದಿಲ್ಲ. ನಿಯೋಗ ಪೂರ್ವನಿಗದಿಯಂತೆ ಚೀನಾಗೆ ಭೇಟಿ ನೀಡಲಿದೆ ಎಂದು ತಿಳಿಸಿದೆ.