ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್
ನವದೆಹಲಿ: ತನ್ನ ನಾಗರಿಕರಿಗೆ ಚೀನಾ ನೀಡಿರುವ ಸಲಹೆ ಕುರಿತು ರಾಜತಾಂತ್ರಿಕ ಹಂತದ ಮೂಲಕವೇ ಭಾರತ ಸರ್ಕಾರ ನೋಡಿಕೊಳ್ಳಲಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ.
ಸಿಕ್ಕಿಂನ ಡೋಕ್ಲಾಮ್ ಪ್ರದೇಶದ ಮೇಲಿನ ಹಿಡಿತದ ವಿಚಾರಕ್ಕೆ ಸಂಬಂಧಿಸಿದಂತೆ ಇಂಡೋ-ಚೀನಾ ತಿಕ್ಕಾಟ ಮುಂದುವರೆದಿರುವಂತೆಯೇ ನಿನ್ನೆಯಷ್ಟೇ ಚೀನಾ ಸರ್ಕಾರ ತನ್ನ ದೇಶದ ಪ್ರಜೆಗಳು ಭಾರತ ಪ್ರವಾಸವನ್ನು ಮುಂದೂಡುವಂತೆ ಸಲಹೆ ನೀಡಿತ್ತು. ಪ್ರಸ್ತುತ ಭಾರತದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಗಡಿ ಉದ್ವಿಗ್ನವಾಗಿರುವುದರಿಂದ ಚೀನಾ ಪ್ರಜೆಗಳು ಭಾರತ ಪ್ರವಾಸವನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಬೇಕು ಮತ್ತು ಭಾರತದಲ್ಲಿ ತಮ್ಮ ಸಂಬಂಧಿಕರ ಸುರಕ್ಷತೆ ಕುರಿತಂತೆ ಜಾಗೃತಿ ವಹಿಸಬೇಕು ಎಂದು ಹೇಳಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, ಇಂತಹ ವಿಚಾರಗಳನ್ನು ನಮ್ಮ ಸರ್ಕಾರ ರಾಜತಾಂತ್ರಿಕ ಹಂತದಲ್ಲೇ ನೋಡಿಕೊಳ್ಳಲಿದೆ. ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ. ಗಡಿ ವಿವಾದ ಸಂಬಂಧ ಭಾರತದ ಉನ್ನತಾಧಿಕಾರಿಗಳು ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics