ರಾಮನಾಥ್, ಕೊವಿಂದ್, ಮೀರಾ ಕುಮಾರ್ 
ದೇಶ

ನನ್ನ ಹೋರಾಟ ಬಿಜೆಪಿ ಸಿದ್ಧಾಂತದ ವಿರುದ್ಧವೇ ಹೊರತು ಕೊವಿಂದ್ ವಿರುದ್ಧವಲ್ಲ: ಮೀರಾ ಕುಮಾರ್

ನನ್ನ ಹೋರಾಟ ಭಾರತೀಯ ಜನತಾಪಕ್ಷ(ಬಿಜೆಪಿ)ದ ಸಿದ್ಧಾಂತದ ವಿರುದ್ಧವೇ ಹೊರತು ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೊವಿಂದ್ ವಿರುದ್ಧ ಅಲ್ಲ ಎಂದು...

ಚಂಡಿಘಡ್: ನನ್ನ ಹೋರಾಟ ಭಾರತೀಯ ಜನತಾಪಕ್ಷ(ಬಿಜೆಪಿ)ದ ಸಿದ್ಧಾಂತದ ವಿರುದ್ಧವೇ ಹೊರತು ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೊವಿಂದ್ ವಿರುದ್ಧ ಅಲ್ಲ ಎಂದು ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮೀರಾ ಕುಮಾರ್ ಹೇಳಿದ್ದಾರೆ. 
ರಾಮನಾಥ್ ಕೊವಿಂದ್ ಅವರ ಬಗ್ಗೆ ನನಗೆ ಗೌರವವಿದೆ. ನನ್ನ ಹೋರಾಟ ಬಿಜೆಪಿ ಸಿದ್ಧಾಂತದ ವಿರುದ್ಧವೇ ಹೊರತು ಕೊವಿಂದ್ ಅವರ ವಿರುದ್ಧ ಅಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 
ರಾಷ್ಟ್ರಪತಿ ಚುನಾವಣೆಗೆ ಇಬ್ಬರು ದಲಿತರು ನಿಂತಿರುವುದರಿಂದ ಆಧುನಿಕ ಭಾರತದಲ್ಲಿ ಜಾತಿಯ ಬಗ್ಗೆ ಮಾತ್ರ ಮಾತನಾಡಲಾಗುತ್ತಿದ್ದು ಇದು ನನ್ನ ಮನಸ್ಸಿಗೆ ತೀವ್ರ ನೋವನ್ನು ಉಂಟು ಮಾಡಿದೆ ಎಂದು ಮೀರಾ ಕುಮಾರ್ ಹೇಳಿದ್ದಾರೆ. 
ಈ ಹಿಂದಿನ ಚುನಾವಣೆಯಲ್ಲಿ ಬೇರೆ ಜಾತಿಯ ವ್ಯಕ್ತಿಗಳು ನಿಂತಿದ್ದಾಗ ಅಂದು ಯಾರು ಜಾತಿಯ ಬಗ್ಗೆ ಮಾತನಾಡಿರಲಿಲ್ಲ ಆಗ ಅವರ ಗುಣಗಳು, ಪ್ರತಿಭೆ, ಸಾಧನೆಗಳು ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಆದರೆ ಇದೀಗ ದಲಿತರಿಬ್ಬರು ರಾಷ್ಟ್ರಪತಿ ಚುನಾವಣೆಗೆ ನಿಂತಿರುವುದು ಜಾತಿ ರಾಜಕಾರಣಕ್ಕೆ ಕಾರಣವಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?