ದೇಶ

ಭ್ರಷ್ಟಾಚಾರದ ಕರಿನೆರಳು:ಉಚಿತ ರೇಷನ್ ನಿಲ್ಲಿಸಿದ ಭಾರತೀಯ ಸೇನೆ

Sumana Upadhyaya
ನವದೆಹಲಿ: ಶಾಂತಿಯುತ ಸ್ಥಳಗಳಿಗೆ ನೇಮಕಾತಿಯಾದ ರಕ್ಷಣಾ ಅಧಿಕಾರಿಗಳಿಗೆ ರೇಷನ್ ಸರಬರಾಜು ಮಾಡದಿರಲು 7ನೇ ವೇತನ  ಆಯೋಗ ನಿರ್ಧರಿಸಿದೆ. ರೇಶನ್ ಗೆ ಬದಲಾಗಿ ಇನ್ನು ಮುಂದೆ ಅಧಿಕಾರಿಗಳಿಗೆ ಪ್ರತಿ ದಿನಕ್ಕೆ ತಮ್ಮ ವೇತನದ ಜೊತೆಗೆ 96 ರೂಪಾಯಿ ರೇಷನ್ ಭತ್ಯೆ ಸಿಗಲಿದೆ. ಈ ಬದಲಾವಣೆ ಜುಲೈ 1ರಂದು ಜಾರಿಗೆ ಬಂದಿದ್ದು ಸೇನಾ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಸೇನಾ ಪಡೆಗಳಲ್ಲಿ ಆಹಾರ ಪೂರೈಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರದ ಆರೋಪಗಳ ನಂತರ ಮೂವರು ಸೇವಾ ಮುಖ್ಯಸ್ಥರ ಶಿಫಾರಸುಗಳ ಮೇರೆಗೆ ಸರ್ಕಾರ ತನ್ನ ಅಧಿಕಾರಿಗಳಿಗೆ ಪಡಿತರ ವಿತರಣೆಯನ್ನು ಬ್ರಿಟಿಷ್ ಕಾಲದ ನಿಯಮದಿಂದ ದೂರ ಸರಿದಿತ್ತು.
ಇದಕ್ಕೆ  ಹಲವು ಸೇನಾಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಟುವಾಗಿ ಟೀಕಿಸಿದ್ದು, ರೇಷನ್ ಭತ್ಯೆ ತೀರಾ ಕಡಿಮೆಯಾಗಿದೆ ಎಂದು ಹೇಳಿದೆ. ಮುಕ್ತ ಮಾರುಕಟ್ಟೆಯಿಂದ ಆಹಾರ ವಸ್ತುಗಳನ್ನು ಖರೀದಿಸಲು ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ಎರಡು ಪಟ್ಟು ತೆರಿಗೆ ಕಟ್ಟಬೇಕಾಗಿದೆ ಎಂದು ಹೇಳುತ್ತಾರೆ.
ಇಲ್ಲಿಯವರೆಗೆ ಸೇನೆ, ನೌಕಾಪಡೆ, ವಾಯು ಪಡೆ ಸೇರಿದಂತೆ ರಕ್ಷಣಾ ಅಧಿಕಾರಿಗಳಿಗೆ ಶಾಂತಿಯುತ ಸ್ಥಳಗಳಲ್ಲಿ ನೇಮಕಾತಿ ಹೊಂದಿದವರಿಗೆ ಕೂಡ ಉಚಿತ ರೇಷನ್ ಗಳನ್ನು ವಿತರಿಸಲಾಗುತ್ತಿತ್ತು. ಆಹಾರ ಧಾನ್ಯಗಳು, ಮಾಂಸ, ಹಣ್ಣು, ತರಕಾರಿಗಳು, ದಿನಸಿ ಪದಾರ್ಥಗಳನ್ನು ಸೇನಾಪಡೆಯ ಮುಖ್ಯ ಉಪ ವಿಭಾಗ ಸರಬರಾಜು ಮಾಡುತ್ತಿತ್ತು.  
ಆದರೆ ಮೌಲ್ಯಮಾಪಕ ನಿಯಂತ್ರಣ ಅಧಿಕಾರಿಗಳ(ಎಎಸ್ ಸಿ) ಬಂಧನದಿಂದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಸಂಗ್ರಹಣೆ ಮತ್ತು ವಿತರಣೆ ಅಕ್ರಮಗಳನ್ನು ತಡೆಯಲು ಮುಂದಾಗಿದೆ.
SCROLL FOR NEXT