ಮುಖೇಶ್ ಅಂಬಾನಿ ಅವರ ನಿವಾಸದಲ್ಲಿ ಕಾಣಿಸಿಕೊಂಡ ಬೆಂಕಿ 
ದೇಶ

ಉದ್ಯಮಿ ಮುಖೇಶ್ ಅಂಬಾನಿ ದುಬಾರಿ ಮನೆ ಅಂಟಿಲಿಯಾದಲ್ಲಿ ಬೆಂಕಿ

ಉದ್ಯಮಿ ಹಾಗೂ ರಿಲಾಯನ್ಸ್ ಗ್ರೂಪ್ ಮಾಲಿಕ ಮುಖೇಶ್‌ ಅಂಬಾನಿ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ...

ಮುಂಬಯಿ: ಉದ್ಯಮಿ ಹಾಗೂ ರಿಲಾಯನ್ಸ್ ಗ್ರೂಪ್ ಮಾಲಿಕ ಮುಖೇಶ್‌ ಅಂಬಾನಿ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದೆ. 
ದಕ್ಷಿಣ ಮುಂಬೈನಲ್ಲಿರುವ ವಿಶ್ವದ ಅತಿ ದುಬಾರಿ ಮನೆ 'ಅಂಟಿಲಿಯಾ'ದಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ.
ಅಂಬಾನಿ ಅವರ 27 ಅಂತಸ್ತಿನ 'ಅಂಟಿಲಿಯಾ' ಕಟ್ಟಡದ 9ನೇ ಮಹಡಿಯಲ್ಲಿ ರಾತ್ರಿ 9ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. 9ನೇ ಮಹಡಿಯಲ್ಲಿ ಮೊಬೈಲ್ ಟವರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.  
'ಅಂಟಿಲಿಯಾ' ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ರಾತ್ರಿ 9:10ಕ್ಕೆ ಮಾಹಿತಿ ಸಿಕ್ಕಿತ್ತು. ಅಂತೆಯೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಯಾವುದೇ ಹೆಚ್ಚಿನ ಹಾನಿಯಾಗಿಲ್ಲ. 
ಈ ಘಟನೆ ಸಂಭವಿಸಿದ ಸಮಯದಲ್ಲಿ ಮುಖೇಶ್‌ ಅಂಬಾನಿ ಮನೆಯಲ್ಲಿ ಇರಲಿಲ್ಲವೆಂದು ತಿಳಿದುಬಂದಿದೆ. 2010 ರಿಂದ ಅಂಬಾನಿ ಕುಟುಂಬ ಅಂಟಿಲಿಯಾದಲ್ಲಿ ವಾಸವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಜೊತೆಗೆ ಕಾಂಗ್ರೆಸ್ ಗೂ ಶಾಕ್; TMC ಬೆಂಬಲ ಬೆನ್ನಲ್ಲೇ ನಂದಿಗ್ರಾಮ 'ಕೈ' ಅಭ್ಯರ್ಥಿ ಕೊಲೆ ಕೇಸ್`ನಲ್ಲಿ ಅರೆಸ್ಟ್!

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್‌ಗಳ ಗಡಿ ದಾಟಿದ Jos Buttler, ಪೊಲಾರ್ಡ್ ದಾಖಲೆ ಧ್ವಂಸ!

ChatGPT ತಂದ ಸಾವು: "ಏನಾಗಲ್ಲ, ಈ ಮಿಶ್ರಣ ಸೇವಿಸು" ಎಂದಿದ್ದ OpenAI; ಮಾತು ನಂಬಿದ 19 ವರ್ಷದ ಯುವಕ ಸಾವು; ತಾಯಿಯ ರೋಧನೆ!

Friendship Cupಗೆ ತಕ್ಕ ಗೌರವ: ಕಪ್ ಜೊತೆಗೇ ಆಫ್ಘನ್ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ, Sarpanch Saab ಮಾಡಿದ್ದೇನು?