ಸಂದೀಪ್ ಬಂಧನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಪೊಲೀಸ್ ಅಧಿಕಾರಿ 
ದೇಶ

ನನ್ನ ಮಗ ಉಗ್ರನೇ ಆಗಿದ್ದರೆ ಶಿಕ್ಷೆ ಕೊಡಿ: ಸಂದೀಪ್ ಶರ್ಮಾ ತಾಯಿ

ನನ್ನ ಮಗ ಭಯೋತ್ಪಾದಕನೇ ಆಗಿದ್ದರೆ, ಲಷ್ಕರ್-ಇ-ತೊಯ್ಬಾ ಉಗ್ರ ಸಂಘನೆಯೊಂದಿಗೆ ನಂಟು ಹೊಂದಿರುವುದೇ ಆದರೆ, ಶಿಕ್ಷೆ ನೀಡಿ ಎಂದು ಬಂಧನಕ್ಕೊಳಗಾಗಿರುವ ಸಂದೀಪ್ ಕುಮಾರ್ ಶರ್ಮಾ...

ಮುಜಾಫರ್ನಗರ: ನನ್ನ ಮಗ ಭಯೋತ್ಪಾದಕನೇ ಆಗಿದ್ದರೆ, ಲಷ್ಕರ್-ಇ-ತೊಯ್ಬಾ ಉಗ್ರ ಸಂಘನೆಯೊಂದಿಗೆ ನಂಟು ಹೊಂದಿರುವುದೇ ಆದರೆ, ಶಿಕ್ಷೆ ನೀಡಿ ಎಂದು ಬಂಧನಕ್ಕೊಳಗಾಗಿರುವ ಸಂದೀಪ್ ಕುಮಾರ್ ಶರ್ಮಾ ಅವರ ತಾಯಿ ಪಾರ್ವತಿ ಹೇಳಿದ್ದಾರೆ. 
ಕೆಲ ದಿನನಗಳ ಹಿಂದಷ್ಟೇ ಕಾಶ್ಮೀರದ ಖ್ವಾಡಿಗುಂಡ್ ನಲ್ಲಿ ಪೊಲೀಸ್ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ 5 ಪೊಲೀಸರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಲಷ್ಕರ್ ಉಗ್ರರೊಂದಿಗೆ ಸಂದೀಪ್ ಕೈ ಜೋಡಿಸಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. 
ಜು.1 ರಂದು ಸೇನೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಎಲ್ಇಟಿ ಕಮಾಂಡರ್ ಬಷೀರ್ ಲಷ್ಕರಿ ಸಂದೀಪ್ ನಿಕವರ್ತಿಯಾಗಿದ್ದ. ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಎನ್ ಕೌಂಟರ್ ವೇಳೆ ಬಷೀರ್ ಅಡಗಿದ್ದ ಮನೆಯಲ್ಲಿಯೇ ಸಂದೀಪ್ ನನ್ನು ಬಂಧನಕ್ಕೊಳಪಡಿಸಲಾಗಿತ್ತು ಎಂದು ಪೊಲೀಸರು ನಿನ್ನೆಯಷ್ಟೇ ಬಹಿರಂಗ ಪಡಿಸಿದ್ದರು. 
ಪ್ರಕರಣ ಸಂಬಂಧ ಸಂದೀಪ್ ತಾಯಿ ಪಾರ್ವತಿ ಹಾಗೂ ಅತ್ತಿಗೆ ರೇಖಾ ಅವರನ್ನು ಉತ್ತರಪ್ರದೇಶ ಉಗ್ರ ನಿಗ್ರಹ ಪಡೆಯ ಅಧಿಕಾರಿಗಳು ವಿಚಾರಣೆಗೊಳಪಡಿಸಿ, ಬಿಡುಗಡೆ ಮಾಡಿದ್ದರು. 
ವಿಚಾರಣೆ ಬಳಿಕ ಪ್ರತಿಕ್ರಿಯೆ ನೀಡಿರುವ ಪಾರ್ವತಿಯವರು, ನನ್ನ ಮಗ ಭಯೋತ್ಪಾದಕನಾಗಿರುವುದು ನಿಜವೇ ಆಗಿದ್ದರೆ ಶಿಕ್ಷೆ ನೀಡಲಿ. ನನ್ನ ಮಗನ ವರ್ತನೆಯಿಂಗಾದಿ ನಾವಿಂದು ಸಮಸ್ಯೆಗಳು ಹಾಗೂ ನಾಚಿಕೆಯಿಂದ ತಲೆತಗ್ಗಿಸುವಂದಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT