ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್
ನವದೆಹಲಿ: ಉಗ್ರರ ಹಿಡಿತದಿಂದ ಮೊಸುಲ್ ಸ್ವತಂತ್ರಗೊಂಡಿದ್ದು, ನಾಪತ್ತೆಯಾಗಿರುವ 39 ಭಾರತೀಯರನ್ನು ರಕ್ಷಣೆ ಮಾಡುವ ಸಲುವಾಗಿ ಭಾರತದ ಉನ್ನತಾಧಿಕಾರಿಗಳ ತಂಡವೊಂದು ಇರಾಕ್'ಗೆ ಭೇಟಿ ನೀಡಲಿದೆ ಎಂದು ಭಾರತ ಸರ್ಕಾರ ಮಂಗಳವಾರ ಹೇಳಿದೆ.
2014ರಲ್ಲಿ ಇರಾಕ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ 39ಕ್ಕೂ ಹೆಚ್ಚು ಭಾರತೀಯರ ಕುರಿತು ಈ ವರೆಗೂ ಯಾವುದೇ ಸುಳಿವುಗಳು ಇನ್ನೂ ಪತ್ತೆಯಾಗಿಲ್ಲ. ನಾಪತ್ತೆಯಾಗಿರುವ ಭಾರತೀಯರ ಪತ್ತೆಗಾಗಿ ಸರ್ಕಾರ ಈಗಾಗಲೇ ಸಾಕಷ್ಟು ಯತ್ನಗಳನ್ನು ನಡೆಸಿದ್ದು. ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.
ಮೊಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರರ ವಿರುದ್ಧ ಜಯ ಸಾಧಿಸಲಾಗಿದೆ. ಇದೀಗ ನಗರವು ಉಗ್ರರ ಹಿಡಿತದಿಂದ ಸ್ವತಂತ್ರಗೊಂಡಿಗೆ ಎಂದು ಇರಾಕ್ ಅಧಿಕೃತವಾಗಿ ಪ್ರಕಟಿಸಿದೆ. ಈ ಹಿನ್ನಲೆಯಲ್ಲಿ ನಾಪತ್ತೆಯಾಗಿರುವ ಭಾರತೀಯ ಪತ್ತೆಗಾಗಿ, ರಕ್ಷಣೆಗಾಗಿ ಉನ್ನತಾಧಿಕಾರಿಗಳನ್ನು ಇರಾಕ್'ಗೆ ಕಳುಹಿಸಲಾಗುತ್ತಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ವಕ್ತಾರರು ಹೇಳಿದ್ದಾರೆ.
ಭಾರತೀಯರನ್ನು ಪತ್ತೆ ಮಾಡಲು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಕುರ್ದಿಷ್'ಗೆ ಭೇಟಿ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ.