ದೇಶ

ಭಾರತೀಯ ರೈಲ್ವೆಯಿಂದ ವಿಶ್ವದ ಮೊದಲ ಸೌರ ಶಕ್ತಿ ಒಳಗೊಂಡ ಡೀಸೆಲ್ ರೈಲಿಗೆ ಚಾಲನೆ

Lingaraj Badiger
ನವದೆಹಲಿ: ಭಾರತೀಯ ರೈಲ್ವೆ ವಿಶ್ವದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿಯಾದ ಸೌರ ಚಾಲಿತ ಡೀಸೆಲ್/ಎಲೆಕ್ಟ್ರಿಕ್ ರೈಲಿಗೆ ಚಾಲನೆ ನೀಡಿದ್ದು, ಈ ರೈಲಿನ ಬೋಗಿಗಳಲ್ಲಿ ಲೈಟ್ ಮತ್ತು ಫ್ಯಾನ್ ಗೆ ಸೌರ ಶಕ್ತಿಯನ್ನು ಅಳವಡಿಸಲಾಗಿದೆ.
ರೈಲ್ವೆ ಇಲಾಖೆಯ ಈ ಯೋಜನೆಯಿಂದಾಗಿ ಪ್ರತಿ ವರ್ಷಕ್ಕೆ ಪ್ರತಿಯ ಬೋಗಿಯಿಂದಾಗುವ ಸುಮಾರು 9 ಟನ್ ಮಾಲಿನ್ಯವನ್ನು ತಡೆಗಟ್ಟಲಿದೆ ಮತ್ತು 21 ಸಾವಿರ ಲೀಟರ್ ಡೀಸೆಲ್ ಉಳಿತಾಯವಾಗಲಿದೆ. ಅಲ್ಲದೆ ಇದರಿಂದ ಪ್ರತಿ ವರ್ಷ 12 ಲಕ್ಷ ರುಪಾಯಿ ಉಳಿತಾಯವಾಗಲಿದೆ.
ವಿಶ್ವದ ಮೊದಲ ಸೌರ ಶಕ್ತಿ ಒಳಗೊಂಡ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಇಂದು ದೆಹಲಿಯ ಸಫ್ದರ್ ಜಂಗ್ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು,
ರೈಲಿನ ಬೋಗಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಅದರಿಂದ ರೈಲಿನ ಲೈಟ್, ಫ್ಯಾನ್ ಹಾಗೂ ಇತರೆ ವಿದ್ಯುತ್ ಚಾಲಿತ ವಸ್ತುಗಳಿಗೆ 7200 ಕಿ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.
SCROLL FOR NEXT