ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೃತ ಉಗ್ರನ ದೇಹದ ಮೇಲೆ ಇಸ್ಲಾಮಿಕ್ ಸ್ಟೇಟ್ ಬಾವುಟ ಹೊದಿಕೆ: ಆತಂಕ ಸೃಷ್ಠಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರನೊರ್ವನ ಅಂತ್ಯಕ್ರಿಯೆಯ ವೇಳೆ ಆತನ ದೇಹದ ಮೇಲೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಬಾವುಟವನ್ನು ಹೊದಿಸಿರುವುದು...

ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವ ನೂರಾರು ಯುವಕರು
Vishwanath S
Updated On : 14 Jul 2017, 2:35 am
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರನೊರ್ವನ ಅಂತ್ಯಕ್ರಿಯೆಯ ವೇಳೆ ಆತನ ದೇಹದ ಮೇಲೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಬಾವುಟವನ್ನು ಹೊದಿಸಿರುವುದು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ. 
ಜಗತ್ತಿನಾದ್ಯಂತ ವಿದ್ವಾಂಸಕ ಕೃತ್ಯಗಳ ಮೂಲಕ ನರಮೇದ ನಡೆಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಭಾರತದಲ್ಲಿ ತನ್ನ ಕಂದಬ ಭಾವುವನ್ನು ಚಾಚಲು ಅವಣಿಸುತ್ತಿದ್ದು ಈ ಮಧ್ಯೆ ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಉಗ್ರನೊರ್ವನ ಅಂತ್ಯಕ್ರಿಯೆಯಲ್ಲಿ ಕಾಶ್ಮೀರದ ನೂರಾರು ಯುವಕರು ಭಾಗಿಯಾಗಿರುವುದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಬಾವುಟಗಳನ್ನು ಪ್ರದರ್ಶಿಸಿದ್ದಾರೆ ಎಂದು ಟ್ರೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇತ್ತೀಚೆಗಷ್ಟೇ ಭಾರತೀಯ ಸೇನೆ ಹಿಜ್ಬುಲ್ ಮುಜಾಯಿದ್ದಿನ್ ಸಂಘಟನೆಯ ಮೂವರು ಉಗ್ರರನ್ನು ಹತ್ಯೆಗೈದಿದ್ದರು. ಇವರ ಪೈಕಿ ಶ್ರೀನಗರ ನಿವಾಸಿ ಸಾಜದ್ ಗಿಲ್ಕರ್ ನ ಅಂತ್ಯಕ್ರಿಯೆಯನ್ನು ಶ್ರೀನಗರದಲ್ಲಿ ನಡೆಸಲಾಯಿತು. ಈ ವೇಳೆ ಆತನ ದೇಹದ ಮೇಲೆ ಪಾಕಿಸ್ತಾನದ ಬಾವುಟವನ್ನು ಹೊದಿಸಲಾಗಿತ್ತು ಎಂದು ವರದಿಯಾಗಿದೆ. 

Advertisement

Advertisement

ಜೂನ್ 22ರಂದು ಜಮ್ಮು ಮತ್ತು ಕಾಶ್ಮೀರದ ಡಿಎಸ್ಪಿ ಮೊಹಮ್ಮದ್ ಆಯೂಬ್ ಪಂಡಿತ್ ಎಂಬುವರನ್ನು ಜಾಮಿಯಾ ಮದೀಸಿ ಮುಂದೆ ಉದ್ರಿಕ್ತರ ಗುಂಪು ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದು ಹತ್ಯೆಗೈದಿದ್ದರು. ಇದಕ್ಕೆ ಪ್ರಚೋದನೆ ನೀಡಿದ್ದ ಹಿಜ್ಬುಲ್ ಮುಜಾಯಿದ್ದೀನ್ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement