ಸಂಗ್ರಹ ಚಿತ್ರ 
ದೇಶ

ತ್ರಾಲ್ ನಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ: ಸೈನಿಕರ ಗುಂಡಿಗೆ 3 ಉಗ್ರರು ಹತ!

ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿ ಮುಂದುವರೆದಿರುವಂತೆಯೇ ಉಗ್ರರ ದಾಳಿಗೆ ಖಡಕ್ ಉತ್ತರ ನೀಡುತ್ತಿರುವ ಭಾರತೀಯ ಸೇನೆ ಶನಿವಾರ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ.

ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ದಾಳಿ ಮುಂದುವರೆದಿರುವಂತೆಯೇ ಉಗ್ರರ ದಾಳಿಗೆ ಖಡಕ್ ಉತ್ತರ ನೀಡುತ್ತಿರುವ ಭಾರತೀಯ ಸೇನೆ ಶನಿವಾರ 3 ಉಗ್ರರನ್ನು ಹೊಡೆದುರುಳಿಸಿದೆ.

ಉತ್ತರ ಪುಲ್ವಾಮ ಜಿಲ್ಲೆಯ ತ್ರಾಲ್ ನ ಸತೋರಾ ಪ್ರದೇಶದಲ್ಲಿ ಉಗ್ರರು ಅವಿತಿಕರುವ ಕುರಿತು ಖಚಿತ ಮಾಹಿತಿ ಪಡೆದ ಸಿಆರ್ ಪಿಎಫ್ ಹಾಗೂ ಸೇನಾ ಯೋಧರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸೇನೆಯ ಗುಂಡಿಗೆ 3 ಉಗ್ರರು ಹತರಾಗಿದ್ದರೆ ಮತ್ತೋರ್ವನಿಗಾಗಿ ಹುಡುಕಾಟ ನಡೆದಿದೆ.  ಘಟನಾ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆದಿದ್ದು, ಘಟನಾ ಪ್ರದೇಶವನ್ನು ಸೈನಿಕರು ಸುತ್ತುವರೆದಿದ್ದಾರೆ.

ಕಳೆದ ಜುಲೈ 9ರಂದು ಇದೇ ತ್ರಾಲ್ ನ ಸೇನಾ ಕ್ಯಾಂಪ್ ಮೇಲೆ ಉಗ್ರರು ಗ್ರೆನೇಡ್ ದಾಳಿ ಮಾಡಿದ್ದರು.ಈ ವೇಳೆ ಓರ್ವ ಯೋಧ ಗಾಯಗೊಂಡಿದ್ದರು ಎಂದು ತಿಳಿದುಬಂದಿದೆ. ಸೇನಾ ಮೂಲಗಳ ಪ್ರಕಾರ ಕಳೆದ ಜನವರಿಯಿಂದ ಈ  ವರೆಗೂ ಕಣಿವೆರಾಜ್ಯದಲ್ಲಿ ಒಟ್ಟು 102 ಮಂದಿ ಉಗ್ರರನ್ನು ಸೇನೆ ಹತ್ಯೆಗೈದಿದೆ ಎಂದು ತಿಳಿದುಬಂದಿದೆ. ಕಳೆದ 7 ವರ್ಷಗಳಲ್ಲಿಯೇ ಈ ಬಾರಿಯೇ ಅತ್ಯಧಿಕ ಸಂಖ್ಯೆಯಲ್ಲಿ ಉಗ್ರರನ್ನು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

Ganesh Chaturthi ಎಫೆಕ್ಟ್; ಮತ್ತೆ ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ, ಇಂದಿನ ದರ ಪಟ್ಟಿ ಇಂತಿದೆ!

ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮಹಿಳೆಯರಿಗೆ ಸುರಕ್ಷಿತ ನಗರ; ಪಾಟ್ನಾ, ಜೈಪುರ ಅಸುರಕ್ಷಿತ!

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

SCROLL FOR NEXT